ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಾಜಿ ಶಾಸಕ ದೇವಾಂದ ಚವ್ಹಾಣರವರ ನೇತೃತ್ವದಲ್ಲಿ ವೈಭವಯುತವಾಗಿ ಅರ್ಥ ಪೂರ್ಣವಾಗಿ 54ನೇ ವರ್ಷದ ಶ್ರೀ ನಾಡದೇವಿ ನವರಾತ್ರಿ ಉತ್ಸವ ಜರುಗಿತು. ಕಾರ್ಯಕ್ರಮವನ್ನು ಶಾಸಕ ಅಶೋಕ ಮನಗೂಳಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ವೇಧಿಕೆ ಮೇಲಿದ್ದ ಗಣ್ಯರೆಲ್ಲರಿಗೂ ಮಾಜಿ ಶಾಸಕರಾದ ದೇವ್ಹಾನಂದ ಚವ್ಹಾಣ ಸನ್ಮಾನಿಸಿ ಗೌರವಿಸಿದರು. ತಾಂಬಾ ಗ್ರಾಮದ ಭಕ್ತಾದಿಗಳು, ಸುತ್ತಮುತ್ತಲಿನ ಗ್ರಾಮದ ಭಕ್ತ ಸಾಗರದ ಅದಮ್ಯ ಉತ್ಸಾಹ ಹಾಗೂ ಶ್ರೀ ಅಂಬಾಭವಾನಿ ಎಜ್ಯುಕೇಶನ್ ಟ್ರಸ್ಟ್, ಶ್ರೀ ಜ.ವಿ.ವ. ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರ ಸಹಯೋಗದೊಂದಿಗೆ ಹಾಗೂ ಸಹಕಾರದ ಫಲವಾಗಿ ದೊಡ್ಡ ಪ್ರಮಾಣದಲ್ಲಿ ಈ ಉತ್ಸವ ಜರುಗಿತು. ನಾಡದೇವಿಯ ನವರಾತ್ರಿ ಉತ್ಸವದಲ್ಲಿ 2001 ಕುಂಭಮೇಳ ದೊಂದಿಗೆ ದೇವಿಯ ಮೂರ್ತಿ ಮೆರವಣಿಗೆ ಸಾಗಿತು. ಇನ್ನೂ ಆನೆ, ಕುದುರೆಗಳು, ಸೃಷ್ಟಿ ಆರ್ಟ್ಸನ ಯಕ್ಷಗಾನ, ಲೇಝೀಮ ಕುಣಿತ, ನಾಶಿಕ ಡೋಲ, ಜಗಲಿಗೆ ಮೇಳ, ಡಿ.ಜೆ ಸೌಂಡ ಸಿಸ್ಟಮ್, ಕೀಲು ಕುದುರೆ, ಬ್ರಾಸ್ ಬ್ಯಾಂಡ, ನವಿಲು ಕುಣಿತ, ಮಹಿಳಾ ಡೊಳ್ಳು ಕುಣಿತ ಕಂಡಿದ್ದು ವಿಶೇಷವಾಗಿತ್ತು.ಇದೇ ವೇಳೆ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ, ಪೂಜ್ಯರಾದ ಅಮೃತಾನಂದ ಸ್ವಾಮೀಜಿ, ಹಾಗೂ ಮಾಜಿ ಶಾಸಕರಾದ ದೇವ್ಹಾನಂದ ಚವ್ಹಾಣರವರ ಪರಿವಾರ ಸೇರಿದಂತೆ ಮಾಜಿ ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ಸದಸ್ಯರು ಭಾಗಿಯಾಗಿದ್ದರು.
VIDEO LINK 👇🏻



