
ನಿಡಗುಂದಿ, ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ತಾಲ್ಲೂಕಾ ದಂಡಾಧಿಕಾರಿ ಎ ಡಿ ಅಮರವಾದಗಿ ಧ್ವಜರೋಹಣ ನೆರವೇರಿಸಿದರು.ಹಲವಾರು ಜನರ ತ್ಯಾಗ,ಬಲಿದಾನದ ಫಲವಾಗಿ ನಮಗೆಲ್ಲ ಸ್ವಾತಂತ್ರ್ಯ ದೊರಕಿದೆ. ಆ ಮಹನೀಯರನ್ನು ಸ್ಮರಿಸುವ ಕಾರ್ಯದ ಜತೆಗೆ ದೇಶದ ಅಭಿವೃದ್ದಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ತಹಸೀಲ್ದಾರ ಎ.ಡಿ ಅಮರವಾದಗಿ ಹೇಳಿದರು. ಪಟ್ಟದಣ ಎಂಪಿಎಸ್ ಶಾಲೆ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಪ.ಪಂ ಆಶ್ರಯದಲ್ಲಿ ಹಮ್ಮಿಕೊಂಡ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು. ತಾಲೂಕ್ ಪಂಚಾಯಿತಿ ಅಧಿಕಾರಿ ವೆಂಕಟೇಶ್ ವಂದಾಲ. ಪ.ಪಂ ಅಧ್ಯಕ್ಷ ಜಂಬಕ್ಕ ವಿಭೂತಿ.ಮತ್ತು ಸದಸ್ಯರು, ಪ.ಪಂ ಮುಖ್ಯಾಧಿಕಾರಿ, ಪೋಲಿಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಪಟ್ಟಣದ ಹಲವಾರು ಗಣ್ಯರು ಇದ್ದರು. ಪಟ್ಟಣ ಹಲವಾರು ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದರು. ಹಲವಾರು ಸಾಧಕ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ನೀಡಿ ಸನ್ಮಾನಿಸಿದರು.



