ವೇದಿಕೆಯಲ್ಲಿ ಕ್ಲೀನ್ ಮೊಬಿಲಿಟಿ ನೀತಿ ಅನಾವರಣ ಮಾಡಲಾಯಿತು
ನಿನ್ನೆ ಬೆಂಗಳೂರಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಂ ಬಿ ಪಾಟೀಲ
ನಮ್ಮ ಕಾಂಗ್ರೆಸ್ ಸರಕಾರ 2025-2030 ನೇ ವರ್ಷದ ಕ್ಲೀನ್ ಮೊಬಿಲಿಟಿ ನೀತಿಯನ್ನು ರೂಪಿಸಿದೆ. ಇದರಿಂದಾಗಿ ₹50,000 ಕೋಟಿ ಹೂಡಿಕೆ ಆಕರ್ಷಣೆಯಾಗಿ, 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಹೊಂದಿದೆ. ನೂತನ ನೀತಿಯಲ್ಲಿ ವಿದ್ಯುತ್ ವಾಹನ (EV) ಮತ್ತು ಹೈಡ್ರೋಜನ್ (ಜಲಜನಕ) ಚಾಲಿತ ಸಾರಿಗೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ.
ಈ ಯೋಜನೆಯಡಿ ಗೌರಿಬಿದನೂರು, ಧಾರವಾಡ ಮತ್ತು ಹಾರೋಹಳ್ಳಿಯಲ್ಲಿ ಮೊಬಿಲಿಟಿ ಕ್ಲಸ್ಟರ್’ಗಳ ಸ್ಥಾಪಿಸುವುದು ಮತ್ತು 2,600 ಹೊಸ EV ಚಾರ್ಜಿಂಗ್ ಸ್ಟೇಷನ್’ಗಳ ನಿರ್ಮಾಣವೂ ಸೇರಿವೆ. ಈಗಾಗಲೇ 2.5 ಲಕ್ಷ EVಗಳು ಮತ್ತು 5,403 ಚಾರ್ಜಿಂಗ್ ಸ್ಟೇಷನ್’ಗಳು ಕಾರ್ಯ ನಿರ್ವಹಿಸುತ್ತಿದ್ದು, EV ಅಳವಡಿಕೆಯಲ್ಲಿ ನಮ್ಮ ರಾಜ್ಯವು ಭಾರತದಲ್ಲಿ ಮೂರನೇ ಸ್ಥಾನದಲ್ಲಿದೆ.
ಈ ನೀತಿ ಪರಿಸರ ಸ್ನೇಹಿ ಸಾರಿಗೆ ಮತ್ತು ಸುಸ್ಥಿರ ಅಭಿವೃದ್ಧಿಯ ಮೇಲಿನ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ, ಕರ್ನಾಟಕವನ್ನು ಹಸಿರು ಮೊಬಿಲಿಟಿ ಕೇಂದ್ರವನ್ನಾಗಿ ರೂಪಿಸಲಿದೆ.
Siddaramaiah DK Shivakumar Shashi Tharoor KJ George
Priyank Kharge V Somanna

