ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್ ಐಪಿಎಲ್ ಪಂದ್ಯಗಳ ನೇರಪ್ರಸಾರಕ್ಕೆ ಮುಂದಾದ ಐನಾಕ್ಸ್
ಐಪಿಎಲ್ ಕ್ರಿಕೆಟ್ ಬಂದರೆ ಸಾಕು ಅಭಿಮಾನಿಗಳು ತಮ್ಮ ಎಲ್ಲ ಕೆಲಸಮರೇತು
ಓಡೋಡಿ ಬಂದು ಟಿವಿ ಮುಂದೆ ಕುಳಿತುಬಿಡುತ್ತಾರೆ. ಇದನ್ನರಿತ ಐನಾಕ್ಸ್ ಮಲ್ಟಿ ಫ್ಲೆಕ್ಸ್ ಪಿವಿಆರ್ ಐನಾಕ್ಸ್ ಥೇಟರ್ ಕ್ರಿಕೆಟ್ ಪ್ರಿಯರಿಗೆ
ದೇಶದಾದ್ಯಂತ ಇರುವ ಐನಾಕ್ಸ್ ಮೂಲಕ ಐಪಿಎಲ್ ಪಂದ್ಯಾವಳಿಯನ್ನು ನೇರಪ್ರಸಾರ ಮಾಡಲು ಮುಂದಾಗಿದೆ. ಸ್ಟಾರ್ ನಟರ ಹೊಸ ಸಿನಿಮಾ ಬಿಡುಗಡೆಯಾದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಿವಿಆರ್ ಐನಾಕ್ಸ್ ಸಂಸ್ಥೆ ಆದಾಯಕ್ಕೆ ಹೊಸ ದಾರಿ ಹುಡುಕಿಕೊಂಡಿದೆ. ದೇಶದಾದ್ಯಂತ 30ಕ್ಕೂ ಹೆಚ್ಚು ನಗರಗಳಲ್ಲಿ ಪಂದ್ಯವನ್ನು
ನೇರಪ್ರಸಾರ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ವರ್ಷ ನಡೆದಿದ್ದ ಐಸಿಸಿ ಪುರುಷರ ಟಿ20 ವಿಶ್ವಕಪ್ನ ಟೀಮ್ ಇಂಡಿಯಾದ ಎಲ್ಲ ಪಂದ್ಯಗಳು ಹಾಗೂ ಸೆಮಿ, ಫೈನಲ್ ಪಂದ್ಯವನ್ನು ಐನಾಕ್ಸ್ ಮೂಲಕ ನೇರಪ್ರಸಾರ ಮಾಡಿತ್ತು.

