ಇಂಡಿ ನಗರದಲ್ಲಿ ದಿನೇ ದಿನೇ ಪುಂಡ ಪೋಕರಿಗಳ ಹಾವಳಿ ಹೆಚ್ಚುತ್ತಿದ್ದು ನಗರದಲ್ಲಿಎಲ್ಲಿ ಬೇಕಲ್ಲಿ ಜೂಜಾಟ ಆಡುವವರ ಸಂಖ್ಯೆ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಇಂಡಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ಬೀಸೆ ಒಂದು ತಂಡ ರಚಿಸಿ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ, ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 6 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಗುನ್ನೆ ನಂ: 30/2025. ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ
ದಿನಾಂಕ: 03-04-2025 ರಂದು 13.15 ಗಂಟೆಗೆ ಇಂಡಿ ಪಟ್ಟಣದ ಉಮರಾಣಿ ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿ,
ಆರೋಪಿಗಳನ್ನ ಬಂಧಿಸಿದ್ದಾರೆ.
“ಆರೋಪಿಗಳು”
ಹುಸೇನ ಹಾಜಿಮಲಂಗ ಸೌದಾಗಾರ ಸಾ|| ಚಡಚಣ,
ಮೈಬೂಬ ಅಮೀನಸಾಬ ಮನಗೂಳಿ,
ಚಾಂದ ಬಾಷಾಸಾಬ ಸಿಗನಳ್ಳಿ ಸಾ|| ಹಲಸಂಗಿ,
ರಾಜು ಇಮಾಮಸಾಬ ಮೋಳಗೆ ಸಾ|| ಹಲಸಂಗಿ,
ಹಸನ ಲಾಲಸಾಬ ಶೇಖ ಸಾ|| ಚಡಚಣ,
ಬಂದೇನವಾಜ ರಾಜೇಸಾಬ ಸಂಜವಾಡ ಸಾ|| ಹಲಸಂಗಿ,
ಇವರೆಲ್ಲರೂ ಸೇರಿ ಇಂಡಿ ಪಟ್ಟಣದ ಉಮರಾಣಿ ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಎಲೆಗಳ ಸಹಾಯದಿಂದಾ ಅಂದರ -ಬಹಾರ ಅಂಬುವ ಮನ್ನಾ ಜೂಜಾಟ ಆಡುತ್ತಿರುವಾಗ ರೋಖ ಹಣ ಪಣಕ್ಕೆ ಹಚ್ಚಿದ ಹಣ ಎಲ್ಲಾ ಸೇರಿ ಒಟ್ಟು 9090/- ರೂಗಳು ಮತ್ತು 52 ಇಸ್ಪೇಟ ಎಲೆಗಳ ಸಮೇತ ಸಿಕ್ಕಿಬಿದ್ದಿದ್ದಾರೆ.
ಇಂಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
ಇಂಡಿ ಶಹರ ಪೊಲೀಸ್ ಠಾಣೆಯ ಸಿಪಿಐ ಪ್ರದೀಪ್ ಬೀಸೆ ಇವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ
ಪ್ರದೀಪ್ ಬೀಸೆ CPI
ಇಂಡಿ ಶಹರ ಪೊಲೀಸ್ ಠಾಣೆ

