ಲಾರಿ ಹಾಗೂ ಕಾರ್ ಮದ್ಯೆ ಭೀಕರ ಅಪಘಾತ ಸಂಭಾವಿಸಿದ್ದು. ಅಪಘಾತದಲ್ಲಿ ರಾಮು ಎಂಬ ಯುವಕ ದುರ್ಮರಣ ಹೊಂದಿರುವ ಘಟನೆ ವಿಜಯಪುರ ನಗರದ ಆಲ್ ಅಮೀನ್ ಆಸ್ಪತ್ರೆ ಸಮೀಪ ನಡೆದಿದೆ. ಇನ್ನೂ ಓರ್ವ ಚಿಕ್ಕ ಮಗುವಿನ ಕಾಲಿಗೆ ತೀವ್ರ ಗಾಯವಾಗಿದ್ದು ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆ ಕಳುಹಿಸಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಕೂಡಲೆ ಜಿಲ್ಲಾಸ್ಪತ್ರೆಗೆ ದಾವಿಸಿ ಗಾಯಾಳುಗಳನ್ನು ಉಳಿಸುವಂತೆ ವೈದ್ಯರಿಗೆ ಬೇಡಿಕೆಯಣ್ಣಿಟ್ಟು ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಿಸದೆ ರಾಮು ಎಂಬ ಯುವಕ ಜೀವ ಬಿಟ್ಟಿದ್ದಾನೆ. ಇನ್ನೂ ಗಾಯಗೊಂಡ ಮಗುವಿನ ಚಿಕಿತ್ಸೆಗೆ ಮುಖಂಡ ವಿಜೂಗೌಡ ಎಲ್ಲಾ ರೀತಿಯಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ.



