ವಿಜಯಪುರ ನಗರದ ಹುಡ್ಕೋ ಕಾಲನಿ ಹತ್ತಿರ ಹಾಗೂ ರಾಘವೇಂದ್ರ ಕಾಲೋನಿ ಹತ್ತಿರದಲ್ಲಿ ಗೃಹ ಬಳಕೆ ಸಿಲಿಂಡರ್ಗಳನ್ನು ಬಳಸಿ ಅಕ್ರಮವಾಗಿ ಆಟೋಗಳಿಗೆ ತುಂಬಿಸುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ನಾಲ್ಕು ಗೃಹ ಬಳಕೆ ಸಿಲಿಂಡರ್ ಹಾಗೂ ತೂಕ ಮಾಡುವ ಯಂತ್ರವನ್ನು ವಶಕ್ಕೆ ಪಡೆದು, ಜಲನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಿದ್ದಾರೆ. ದಾಳಿಯಲ್ಲಿ ಆಹಾರ ಇಲಾಖೆ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ, ಜಲನಗರ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಮಹೇಶ ಸಂಖ, ಪೊಲೀಸ್ ಸಿಬ್ಬಂದಿಗಳಾದ ವಿ ಎಂ ಪವಾರ, ಪಿ ಆರ್ ರಾಠೋಡ, ಎಸ್ ವಾಯ್ ನಾಟಿಕಾರ, ಎಚ್ ಎನ್ ಪೂಜಾರಿ, ಎನ್ ಬಿ ಚವ್ಹಾಣ, ಸಚೀನಕುಮಾರ ನಂದೇಶ ಹಾಗೂ ಎಂ ಆರ್ ಸಿಂಧೆ ಭಾಗವಹಿಸಿದ್ದರು ಎಂದು ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ತಿಳಿಸಿದ್ದಾರೆ.




