ಶ್ರಾವಣ ಮಾಸದ ಪೂರ್ವ ದಲ್ಲಿ ಶ್ರೀ ಬಘವಾನ್ ವಿಷ್ಣು ಜ್ನ್ಯಾನ ನಿದ್ರೆಯಲ್ಲಿ ಜಾರುವನು ಅದರಂತೆ ಶ್ರಾವಣ ಮಾಸದ ಈ ಒಂದು ತಿಂಗಳು ಕೇಳಿದ ವರವನ್ನು ಕೊಡುವ ಪರಮಾತ್ಮ,ಈ ಒಂದು ತಿಂಗಳ ಕಾಲ ಈ ಬ್ರಹ್ಮಾಂಡವನ್ನು ನೋಡಿಕೊಳ್ಳುವನು ಶ್ರವಣ ಮಾಸ ಮುಕ್ತಾಯ ಹಂತದಲ್ಲಿ ಪ್ರಕೃತಿ ಯಲ್ಲಿ ಬದಲಾವಣೆ ಸಮಯ ಅದರಂತೆ ಸಕಲ ವೀಘ್ನ ಹರಣ ಮಾಡಲು ಗಣೇಶ್ ಚತುರ್ಥಿ ಎಂದು ಗಣೇಶ್ ಬರುವನು ಅದರಂತೆ ಇಂದು ಗಣೇಶ್ ಚತುರ್ಥಿ ವಿಜೃಂಭಣೆಯಿಂದ ಮನೆಗೆ ಗಣೇಶನ ಆಗಮನ ಮಾಡಿಕೊಳ್ಳುವ ದಿನ.
ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಜಯಪುರದ ಪ್ರಸಿದ್ಧ “ವಿಜಯಪುರ ಚಾ ಲಂಬೋದರ” ಗಣೇಶ ಪ್ರತಿಮೆಯನ್ನು ಆಗಸ್ಟ್ 26, 2025 ರಂದು ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಗಣೇಶನ ಮೂರ್ತಿಯ ಭಾರಿ ಮೆರವಣಿಗೆ ಸಂಗೀತ
ಪೂಜೆ ಮತ್ತು ಉತ್ಸವದೊಂದಿಗೆ ಗಣೇಶನ ಪ್ರತಿಷ್ಠಾಪನೆ ಮಾಡಲಾಯಿತು. ಇನ್ನೂ ಗಾಂಧಿ ಚೌಕ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 10 ದಿನಗಳ ಕಾಲ ಗಣೇಶ ಉತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಈ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ ಮತ್ತು ವಿವಿಧ ಸಮುದಾಯದ ಚಟುವಟಿಕೆಗಳು ಇರುತ್ತವೆ. ಗಾಂಧಿ ಚೌಕ ಸೇರಿದಂತೆ ನಗರದ ಎಲ್ಲೆಡೆ ಪ್ರತಿ ವರ್ಷದಂತೆ ಅದ್ಧೂರಿ ಗಣೇಶೋತ್ಸವವನ್ನು ಆಯೋಜಿಸಲಾಗಿದೆ.
ಬೃಹತ್ ಗಣೇಶ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.
ಹತ್ತಾರು ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಬಪ್ಪಾನ ದರ್ಶನ ಪಡೆಯುತ್ತಾರೆ.



