ಚಳ್ಳಕೆರೆ ನಗರದಲ್ಲಿ ಇತ್ತೀಚೆಗೆ ಜಾಮಿಯಾ ಮಸೀದಿ ಚುನಾವಣೆಯಲ್ಲಿ ಗೆದ್ದು ಬೀಗಿದ ಅಭ್ಯರ್ಥಿಗಳು ಮತ್ತು ಜಾಮಿಯಾ ಮಸೀದಿ ಅಧ್ಯಕ್ಷ ಯಾಕೂಬ್ ಅಲಿ ನೇತೃತ್ವದ ತಂಡ ದಿನೇ ದಿನೇ ಹೊಸ ಹೊಸ ಅಭಿವೃದ್ಧಿ ಕಾರ್ಯಗಳು ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಇಂದು ಮಕ್ಕಳಿಗೆ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಪ್ರತಿಭಾ ಸ್ಪರ್ಧೆ ಮಾಡಿ ಹಣದ ರೂಪದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿದರು. ನಂತರ ಅಧ್ಯಕ್ಷ ಯಾಕೂಬ್ ಅಲಿ ಮಾತನಾಡಿ ಮುಂದಿನ ದಿನಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಿ ಒಳ್ಳೆಯ ಸ್ಥಾನ ಮಾನ ಪಡೆದುಕೊಳ್ಳಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಇದೆ ವೇಳೆ ಮಸೀದಿ ಉಪಾಧ್ಯಕ್ಷ ಇಂಜಿನಿಯರ್ ರಾಜ, ಮುಜೀಬುಲ್ಲ,ಕಲೀಮುಲ್ಲಾ ಸಲೀಂ, ತೌಸೀಫ್ ಮಾಸ್ತನ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ : ಸಯ್ಯದ್ ನಬಿ ಚಳ್ಳಕೆರೆ




