ಗಣೇಶ ವಿಸರ್ಜನೆ ವೇಳೆ ಅವಘಡ ಸಂಭವಿಸಿದೆ. ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ವಿಜಯಪುರ ನಗರದ ಡೋಬಳೆ ಗಲ್ಲಿಯ ಗಣಪತಿ ವಿಸರ್ಜನೆ ವೇಳೆ ನಡೆದಿದೆ.ಶುಭಂ ಸಂಕಳ (21) ಎಂಬಾತ ಸಾವನ್ನಪ್ಪಿರುವ ದುರ್ದೈವಿಯಾಗಿದ್ದು,ಪ್ರಭಾಕರ ಜಂಗಲೆ (22) ಹಾಗೂ ಲಖನ್ ಚವ್ಹಾಣ (28) ಎಂಬುವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಕುರಿತು ವಿಜಯಪುರ ಗಾಂಧಿ ಚೌಕ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.




