ಖಮೇನಿ ಸಾವಿಗೆ ರಾಜ್ಯದಲ್ಲಿ ಶೋಕಾಚಾರಣೆ, ಈ ಯುದ್ಧದಲ್ಲಿ ನಮ್ಮದೇನು ಪಾತ್ರವಿಲ್ಲ. ರಾಜ್ಯದಲ್ಲಿ ಪ್ರತಿಭಟನೆ ಮಾಡುವವರು ದೇಶದ್ರೋಹಿಗಳು, ಪ್ರತಿಭಟಿಸುವವರು ದೇಶದ್ರೋಹಿಗಳು, ದೇಶಪ್ರೇಮಿಗಳಲ್ಲ ಎಂದು ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ನಮ್ಮ ಭಾರತೀಯರಿಗೆ ಇಡೀ ಜಗತ್ತಿನಲ್ಲಿ ಎಲ್ಲಿಯೂ ಏನು ಆಗುವುದಿಲ್ಲ. ಯಾಕೆಂದರೆ ಉಕ್ರೇನ್ ನಲ್ಲಿ ಯುದ್ಧವಾದಾಗ ಪಾಕಿಸ್ತಾನದವರು ಸಹಿತ ಭಾರತದ ಧ್ವಜ ಹಿಡಿದು ಓಡಿ ಬಂದರು. ಅಂದ್ರೆ ಭಾರತ ಜಗತ್ತಿನಲ್ಲಿಯೇ ಎಲ್ಲರ ಪ್ರೀತಿಯನ್ನು ಪ್ರಧಾನಿ ನರೇಂದ್ರ ಮೋದಿರವರು ಗಳಿಸಿದ್ದಾರೆ. ಇಸ್ರೇಲ್ ಜೊತೆಗೂ ದೋಸ್ತಿ ಇದೆ. ಸೌದಿ ಅರೇಬಿಯಾ, ದುಬೈ, ಅಪಘಾನಿಸ್ತಾನ್ ಜೊತೆಗೂ ದೋಸ್ತಿಯಿದೆ. ನಾವು ಯಾರ ಜೊತೆಗೂ ಯುದ್ಧ ಮಾಡುತ್ತಿಲ್ಲ. ಈ ಯುದ್ಧದಲ್ಲಿ ನಮ್ಮದೇನು ಪಾತ್ರವಿಲ್ಲ. ಈಗಾದ್ರೂ ಬುದ್ಧಿ ಇದ್ರೆ ಭಾರತದಲ್ಲಿದ್ದು ಇಲ್ಲಿಯ ಅನ್ನ ತಿನ್ನುತ್ತಿದ್ದರೆ, ಜೈ ಭಾರತ್ ಎನ್ನಬೇಕೆಂದು ಆಕ್ರೋಶ ಹೊರಹಾಕಿದರು.




