ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾದವರೇ ಹೆಚ್ಚು.ಅದರಲ್ಲೂ ಪ್ರಾಯದ ಯುವಕರೇ ಜಾಸ್ತಿ. ಇದೀಗ ಬಾಲಿವುಡ್ ಚಲನ ಚಿತ್ರೋದ್ಯಮದಲ್ಲಿ ಒಂದು ದುರಂತ ಸಂಭವಿಸಿದೆ. ಖ್ಯಾತ ಗಾಯಕ ಮತ್ತು ನಟ ರಿಷಭ್ ಟಂಡನ್ (32) ಹಠಾತ್ ನಿಧನರಾದರು. ಅವರ ಸಾವಿಗೆ ಹೃದಯಾಘಾತ ಕಾರಣವಾಗಿದ್ದು, ಮಂಗಳವಾರ ಮಧ್ಯರಾತ್ರಿಯ ವೇಳೆ ದೆಹಲಿಯಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ ಎಂದು ಅವರ ಆಪ್ತರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ. ಅವರ ನಿಧನಕ್ಕೆ ಚಲನಚಿತ್ರ ರಂಗದ ಗಣ್ಯರು ಶೋಕ ವ್ಯಕ್ತಪಡಿಸುತ್ತಿದ್ದಾರೆ.




