ಶ್ರೀಕಾರ್ ಕ್ರಿಯೇಷನ್ ಲಾಂಛನದಲ್ಲಿ ಪ್ರೊಡಕ್ಷನ್ ನಂ.1 ಚಲನ ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ. ಹೈದ್ರಾಬಾದ್ ಮತ್ತು ಕರ್ನಾಟಕ ಮೈಸೂರಿನಲ್ಲಿ ನಡೆಯುತ್ತಿದೆ. ಈ ಚಿತ್ರ ಹಿಂದೂ ಪವಿತ್ರ ಗ್ರಂಥ ಶ್ರೀ ಭಗವದ್ಗೀತೆಯ ಒಂದು ಸ್ಲೋಕ ಧರ್ಮೋ ರಕ್ಷಿತ ರಕ್ಷಿತಃ ಸ್ಲೋಗನ ಆಧಾರಿತ ಚಿತ್ರ ಇದಾಗಿದ್ದು.ಈಗ ಚಿತ್ರದ ಚಿತ್ರೀಕರಣ ರಭಸದಿಂದ ಸಾಗುತ್ತಿದೆ. ಈ ಚಿತ್ರಕ್ಕೆ ನಿರ್ದೇಶನ ಮತ್ತು ನಿರ್ಮಾಪಕ ಕಟ್ಟಾ ಪ್ರಸಾದ ಹೊಣೆ ಹೊತ್ತಿದ್ದಾರೆ.ಕಟ್ಟಾ ಪ್ರಸಾದ್ ಮೂಲತಹ ಹೈದ್ರಾಬಾದ್ ನವರು ಚಿತ್ರರಂಗದಲ್ಲಿ ಕಟ್ಟಾ ಪ್ರಸಾದರವರ ಪ್ರೊಡಕ್ಷನ್ ನಲ್ಲಿ ಮುಡಿಬಂದ ಕನ್ನಡ ಮತ್ತು ತೆಲಗು ಚಿತ್ರಗಳು ಅಪಾರ. ಅದರಲ್ಲಿ ಕನ್ನಡ ನಾಲ್ಕು ಚಿತ್ರ – ಓಹೋ, ಬಿಡಿಸದ ಬಂದ, ದವಡವ 16 to ೬೦, ತೆರೆಕಂಡಿದೆ. ಈಗ ಪ್ರೊಡಕ್ಷನ್ ನಂ.1 ಚಿತ್ರ ಕಟ್ಟಾ ಪ್ರಸಾದ್ ಹೊತ್ತು ತಂದಿದ್ದಾರೆ. ಈ ಚಿತ್ರವು ತೆಲಗು ಮತ್ತು ಕನ್ನಡ ಭಾಷೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರಕ್ಕೆ ನಾಯಕ ಅಕಿಲ್ ಮೂಲತಹ ವೈಜಾಕ ಹೈದ್ರಾಬಾದ್ ನಿವಾಸಿ ಚಿತ್ರದ ನಾಯಕನಿಗೆ ಪವರ್ ಸ್ಟಾರ್ ಪುನೀತರಾಜ್ ರವರ ಚಿತ್ರ ರಾಜಕುಮಾರ್ ಚಿತ್ರ ನೋಡಿ ಪವರ್ ಸ್ಟಾರ್ ಅಭಿನಯ, ಡಾನ್ಸ್, ಆಕ್ಟಿಂಗ್ ಗೆ ಫಿಧಾ ಆಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಅಕಿಲ್ ಗೆ ಕನ್ನಡ ಭಾಷೆ ಹಾಗೂ ಕನ್ನಡಿಗರ ಮೇಲೆ ಅಪಾರ ಪ್ರೇಮ ಅದಕ್ಕಾಗಿ ಈ ಚಿತ್ರವು ಕನ್ನಡ ಹಾಗೂ ತೆಲಗು ಭಾಷೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದ ಒಂದು ಪೋಷನ್ ಹೈದ್ರಾಬಾದ್ ನಲ್ಲಿ ಆರಂಭಗೊಂಡು ಈಗ ಕರ್ನಾಟಕದ ಮೈಸೂರಿನಲ್ಲಿ ಚಿತ್ರವು ಇದೆ ಸೆಪ್ಟೆಂಬರ್ 28ಕ್ಕೆ ಮುಕ್ತಾಯ ವಾಗಲಿದೆ ಎಂದು ಚಿತ್ರದ ನಿರ್ದೇಶಕ ಕಂ ನಿರ್ಮಾಪಕ ಹೇಳಿದ್ದಾರೆ. ಇನ್ನು ಸಾಂಗ್ ಮತ್ತು ಫೈಟ್ ಸೀನ್ ಬಾಕಿಯಿದೆ. ಚಿತ್ರಕ್ಕೆ ಛಾಯಾಗ್ರಾಹಕ ಕೆ ವಾಸುದೇವ್ ವಿಭಿನ್ನ ಸುಂದರವಾಗಿ ಲೈಟಿಂಗ್ ಮಾಡುತ್ತಿದ್ದಾರೆ. ಮತ್ತು ಚಿತ್ರದ ಮ್ಯಾನೇಜರ್ ವಿ ಲೀಲಾ ಮನೋಹರ್ 42ವರ್ಷ ದಿಂದ ಮಾಜಿ ಸಿಎಂ ಬಂಗಾರಪ್ಪರವರ ಆಕಾಶ್ ಆಡಿಯೋ ಕಂಪನಿಯಲ್ಲಿ ಮೆನೇಜರ್ ಆಗಿ ಕೆಲಸಮಾಡಿದ್ದಾರೆ. ಈ ಚಿತ್ರಕ್ಕೆ ವಿ ಲೀಲಾಮನೋಹರ್ ತುಂಬಾ ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದಾರೆ. ಸಹಾಯ ಮತ್ತು ಸಹಕಾರ ಕೆಂಪಣ್ಣ ಇವರು ಕನ್ನಡ ಚಿತ್ರರಂಗದಲ್ಲಿ 40ವರ್ಷ ದಿಂದ ಕಾರ್ಯಸಲ್ಲಿಸುತ್ತಿದ್ದಾರೆ.




