ಸಚಿವ ಎಂ ಬಿ ಪಾಟೀಲ್ ಜಪಾನ್ ಪ್ರವಾಸದ ವೇಳೆ ವಿಶ್ವ ವಿಖ್ಯಾತ ಮೋಟಾರ್ ಕಂಪನಿಯಾದ ಹೋಂಡಾದ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ನೋರಿಯಾ ಕೈಹಾರಾರನ್ನು ಭೇಟಿಯಾಗಿ, ಕರ್ನಾಟಕದಲ್ಲಿ ಹೋಂಡಾದ ಉತ್ಪಾದನಾ ವ್ಯಾಪ್ತಿಯನ್ನು ವಿಸ್ತರಿಸುವುದರ ಕುರಿತು ಮಾತುಕತೆ ನಡೆಸಿದರು.ಕರ್ನಾಟಕದ ನರಸಾಪುರ ಟೂ-ವೀಲರ್ ಕಾರ್ಖಾನೆ ಭಾರತದಲ್ಲಿನ ಅತಿದೊಡ್ಡ ಸ್ಥಾವರವಾಗಿದೆ. ಇಲ್ಲಿ ವಾರ್ಷಿಕವಾಗಿ 2.4 ದಶಲಕ್ಷ ವಾಹನಗಳನ್ನು ಉತ್ಪಾದಿಸಲಾಗುತ್ತಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದ ವೇಳೆ ಮಾಡಿಕೊಂಡ ಒಪ್ಪಂದದ (MOU) ಅಡಿಯಲ್ಲಿ ₹600 ಕೋಟಿ ಹೂಡಿಕೆಯೊಂದಿಗೆ ಭಾರತದ ಮೊದಲ ಇಲೆಕ್ಟ್ರಿಕ್ ಟೂ-ವೀಲರ್ ಉತ್ಪಾದನಾ ತಾಣವನ್ನು ಕರ್ನಾಟಕದಲ್ಲಿ ಸ್ಥಾಪಿಸಲಿದೆ ಎಂಬುದು ಸಂತೋಷದ ವಿಷಯ.ದ್ವಿಚಕ್ರ ವಾಹನಗಳ ಕ್ಷೇತ್ರದಾಚೆಗೆ ಹೆಚ್ಚಿನ ಹೂಡಿಕೆಗಳನ್ನು ಪರಿಶೀಲಿಸಲು ಪ್ರೋತ್ಸಾಹಿಸಿದರು. ಹೋಂಡಾದ ಕಾರ್ಯಾಚರಣೆ ಮತ್ತು ಭವಿಷ್ಯದ ವಿಸ್ತರಣೆಗಳನ್ನು ಸುಗಮಗೊಳಿಸಲು ಕರ್ನಾಟಕ ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.ಇನ್ನೂ ಇಲೆಕ್ಟ್ರಿಕ್ ವಾಹನಗಳು (EV) ಮತ್ತು ಅತ್ಯಾಧುನಿಕ ಸಂಚಾರ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ರೂಪಿಸುತ್ತಿದ್ದೇವೆ ಎಂದರು.





