ವಿಜಯಪುರ ಶಹರದಲ್ಲಿ ಇತ್ತಿಚಿಗೆ ಘಟಿಸುತ್ತಿದ್ದ ಹಗಲು ಮನೆ ಕಳ್ಳತನ ಪ್ರಕರಣಗಳ ತಪಾಸಣೆ ಕುರಿತು ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹಾಗೂ ಪೊಲೀಸ್ ಉಪಅಧೀಕ್ಷಕ ಬಸವರಾಜ ಯಲಿಗಾರ, ಗೋಲಗುಂಬಜ ಸಿಪಿಐ ಮಲ್ಲಯ್ಯ ಮಠಪತಿ ಮಾರ್ಗದರ್ಶನದಲ್ಲಿ ಮತ್ತು ಪಿ.ಎಸ್.ಐ ಮಹೇಶ ಸಂಖ, ಸಿ ಆರ್ ಸಾಗರ, ಜಲನಗರ ಪೊಲೀಸ್ ಠಾಣಿ ಪಿಎಸ್ಐ ಎಮ್ ಸಂಗಾಪೂರ ನೇತೃತ್ವದಲ್ಲಿ ಮತ್ತು ಸಿಬ್ಬಂದಿಗಳಾದ ಸತೀಶ ನಾಟಿಕಾರ, ಮಹೇಶ ಸಾಲಿಕೇರಿ, ಎನ್ ಬಿ ಚವ್ಹಾಣ. ಮತ್ತು ಶಶಿಕಾಂತ ತೋರವಿ, ಆರ್.ಡಿ ಮುಲ್ಲಾ ಹಾಗೂ ತಾಂತ್ರಿಕ ಸಿಬ್ಬಂದಿಯಾದ ಗುಂಡು ಗಿರಣಿವಡ್ಡರ, ಮಹ್ಮದ ಬಾಗವಾನ ರವರನ್ನು ಒಳಗೊಂಡ ಒಂದು ತನಿಖಾ ತಂಡವನ್ನು ರಚನೆ ಮಾಡಿ, ಸದರಿ ತನಿಖಾ ತಂಡವು ಪತ್ತೆ ಕುರಿತು ನೆರೆಯ ಜಿಲ್ಲೆಗಳಾದ ಬಾಗಲಕೋಟ, ಬೆಳಗಾವಿ ಕಡೆಗಳಲ್ಲಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಆರೋಪಿತರ ತಪಾಸಣೆಯಲ್ಲಿ ಇದ್ದಾಗ ದಿನಾಂಕ: 13/08/2025 ರಂದು ಇಬ್ಬರೂ ಆರೋಪಿತರನ್ನು ವಿಜಯಪುರ ಶಹರ ಹೌಸಿಂಗ್ ಬೋರ್ಡ ಕಡೆಗೆ ಅಟೋದಲ್ಲಿ ತಿರುಗಾಡುವಾಗ ಹಿಡಿದುಕೊಂಡು ನಂತರ ಹೆಚ್ಚಿನ ವಿಚಾರಣೆ ಮಾಡಲಾಗಿ ಒಟ್ಟು ಮೂರು ಜನರು ಕೂಡಿ ಪ್ರಕರಣದಲ್ಲಿ ಮನೆಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಆ ಪ್ರಕಾರ ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ನಂತರ ಸದರಿ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿತನಿಗೆ ದಿನಾಂಕ: 21/08/2025 ರಂದು ಕನಕದಾಸ ಬಡಾವಣೆಯಲ್ಲಿ ತಿರುಗಾಡುವಾಗ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು. ಸದರಿ ಪ್ರಕರಣದಲ್ಲಿ ಆರೋಪಿತರಾದ ಸಮೀರ ನಬಿಲಾಲ ಇನಾಮದಾರ, ಸಾ: ಹಳಕೇರಿ ಗಲ್ಲಿ, ಝಂಡಾ ಕಟ್ಟಾ, ಜೆ ಎಂ ರೋಡ ವಿಜಯಪುರ ಮತ್ತು ಹಸನಡೊಂಗ್ರಿ ಚಾಂದಸಾಬ ಮುಲ್ಲಾ, ಸಾ: ಶಾಪೇಠಿ ಅಪ್ಸರಾ ಟಾಕೀಸ್ ಹತ್ತಿರ ಹಾಲಿ ಸುಹಾಗ ಕಾಲನಿ, ವಿಜಯಪುರ ಹಾಗೂ ಶಪೀಕ್ ಅಹ್ಮದ ಮಹೃದಗೌಸ ಇನಾಮದಾರ, ಸಾ: ನಿಸ್ಸಾರ ಮಡ್ಡಿ ವಿಜಯಪುರ ಎಂಬ ಆರೋಪಿತರ ಕಡೆಯಿಂದ ಜಲನಗರ ಪಿಎಸ್ ಗುನ್ನೆ ನಂ: 90/2025 ಕಲಂ 331 (3) 305 ಬಿಎನ್ಎಸ್-2023 ನೇ ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 65 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಬಜಾಜ ಕಂಪನಿಯ ಅಟೋ ರೀಕ್ಷಾ ಹಾಗೂ ಒಂದು ಕಬ್ಬಿಣದ ರಾಡ ಹೀಗೆ ಒಟ್ಟು 8.37,000/- ರೂ ಗಳನ್ನೂ ಆರೋಪಿತರಿಂದ ಜಪ್ತಿ ಮಾಡಲಾಗಿದೆ.ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿರವರು ಶ್ಲಾಘಿಸಿದರು.




