ವಿಜಯಪುರ : ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ಮುಖ್ಯಮಂತ್ರಿ, ಡಿಸಿಎಂ ಸೇರಿದಂತೆ ಸಂಬAಧಿಸಿದ ಸಚಿವರು ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು. ಇಲ್ಲಿನ ಗಾಂಧಿವೃತ್ತದಲ್ಲಿ ಸೇರಿದ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

ಬೆಂಗಳೂರಿನಿಕಲ್ಲಿ ನಡೆದ ಘಟನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗಿದೆ. ಇದೊಂದು ಅವಮಾನಕರ ಘಟನೆ. ತಮ್ಮದಲ್ದದ ತಪ್ಪಿಗೆ ಪೋಲಿಸ್ ಇಲಾಖೆ ಶಿಕ್ಷೆ ಅನುಭವಿಸುವಂತಾಗಿದೆ. ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಕೂಡಲೇ ಸಿಎಂ, ಡಿಸಿಎಂ ಮತ್ತು ಸಂಬAಧಿಸಿದ ಸಚಿವರು ಕೂಡಲೇ ರಾಜಿನಾಮೆ ನೀಡದಿದ್ದರೇ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವು ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಆರ್ಸಿಬಿ ವಿಜಯೋತ್ಸಕಕ್ಕೆ ಸೂಕ್ತ ಭದ್ರತೆ ನೀಡಬೇಕಿದ್ದ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಸರ್ಕಾರದಲ್ಲಿನ ಸಚಿವರು ಕಾನೂನು ಸುವ್ಯವಸ್ಥೆ ಲಾಪಾಡಬೇಕಿದ್ದ ಸಿಎಂ, ಡಿಸಿಎಂ, ಗೃಹ ಸಚಿವ ತಪ್ಪು ನಿರ್ಧಾರದಿಂದಲೇ ಜನ ಪ್ರಾಣ ಕಳೆದು ಕೊಂಡಿದ್ದಾರೆ ಎಂದು ದೂರಿದರು.
ಪ್ರಕರಣಕ್ಕೆ ಸಂಬAಧಿಸಿದAತೆ ತಪ್ಪಿತಸ್ಥರ ಮೇಲೆ ಕ್ರಮವಾಗಬೇಕೆ ವಿನಾಃ ಪೋಲಿಸ್ ಮೇಲೆ ಅಲ್ಲ. ಸರ್ಕಾರ ತಮಗೆ ಕುಣಿಯಲು ಬಾರದಿದ್ದರೆ ನೆಲ ಡೊಂಕು ಎಂದರAತೆ ಹಾಗೇ ವರ್ತಿಸುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವದರಲ್ಲಿ ಸಂಪೂರ್ಣ ವಿಫಲವಾಗಿದ್ದು, ಕೂಡಲೇ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ರಾಜಿನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸವಾಲು ಹಾಕಿದರು.
ಪಾಲಿಕೆ ಸದಸ್ಯರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಳುಗೌಡ ಪಾಟೀಲ ಅವರು ಕೂಡಾ ಮಾತನಾಡಿ, ಕಾಲ್ತುಳಿತ ಅನಾಹುತದ ಸಂಪೂರ್ಣ ಹೊಣೆಯನ್ನು ಸರ್ಕಾರ ಹೊರಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಕಾರಜೋಳ, ಮುಖಂಡರಾದ ಉಮೇಶ ಕೋಳಕೂರ, ಸುರೇಶ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿ, ಮಹೇಂದ್ರ ನಾಯಕ, ಪಾಲಿಕೆ ಸದಸ್ಯರಾದ ರಾಹುಲ ಜಾಧವ, ರಾಜು ಮಗಿಮಠ, ರಾಜೇಶ ತವಸೆ, ರವಿಕಾಂತ ಬಗಲಿ, ಪಾಪುಸಿಂಗ ರಜಪೂತ, ಶ್ರೀಹರ್ಷಗೌಡ ಪಾಟೀಲ, ಜಗದೀಶ ಮುಚ್ಚಂಡಿ, ಸ್ವಪ್ನಾ ಕಣಮುಚನಾಳ, ಭಾರತಿ ಭುಂಯ್ಯಾರ, ಭರತ ಕುಲಕರ್ಣಿ, ಸಂತೋಷ ನಿಂಬರಗಿ, ಕಲ್ಮೇಶ ಹಿರೇಮಠ, ವಿಠ್ಠಲ ನಡುವಿನಕೇರಿ, ರಾಮಚಂದ್ರ ಚವ್ಹಾಣ, ವಿಷ್ಣು ಜಾಧವ, ಸಾಗರ ಶೇರಖಾನ, ಶೀಲವಂತ ಉಮರಾಣಿ, ಚನ್ನು ಚಿನಗುಂಡಿ, ಶರಣಬಸು ಕುಂಬಾರ, ಸಂಪತ್ ಕೋಹಳ್ಳಿ, ರವಿ ಬಿರಾದಾರ, ಮಹೇಶ ಒಡೆಯರ, ಭೀಮಸಿಂಗ ರಾಠೋಡ, ವಾರೀಶ ಕುಲಕರ್ಣಿ, ಶ್ರೀಹರಿ ಕುಲಕರ್ಣಿ, ಪ್ರಮೋದ ಬಡಿಗೇರ, ಶಹಾನಾಜಾ, ಗೀತಾ ಚೌಧರಿ, ರೇಣುಕಾ ಹೊಸಮನಿ, ಭಾರತಿ ಶಿವಣಗಿ, ಶಾಂತಾ ಉತ್ಲಾಸರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.



