ವಿಜಯಪುರದ ಬಸವನಬಾಗೇವಾಡಿಯ ಮುಳವಾಡಿನಲ್ಲಿ ಇಂದು ಬಸವೇಶ್ವರ ಪುತ್ತಳಿಯ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೆ.ಇದೇ ವೇಳೆ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷದ ಕುರಿತು ಚರ್ಚೆ ಮಾಡಲಾಯಿತು ಎಂದು ಧಾರವಾಡ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು .ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಇವತ್ತು ಕಾಂಗ್ರೆಸ್ ದೂರಾಡಳಿತ, ಭ್ರಷ್ಟಚಾರವೆನಿದೆ, ಅದಕ್ಕೆ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ಸಿನ ವಿರೋಧಿ ವಾತಾವರಣ ಏನಿದೆ ಅದನ್ನು ನಮ್ಮ ಪಕ್ಷ ಸರಿಯಾಗಿಸಿ ಆಡಳಿತ ಮಾಡುವುದಕ್ಕೇನೆಲ್ಲಬೇಕು ಅದನ್ನ ಹೈ ಕಮಾಂಡ್ ನಿರ್ಧರಿಸುತ್ತದೆ. ಹಿಂದೂ ಓಟ್ ಬ್ಯಾಂಕ್ ಒಡೆದು ತಾವು ಲಾಭ ಪಡೆದುಕೊಳ್ಳುವುದೇ ಕಾಂಗ್ರೆಸ್ಸಿಗರ ಉದ್ದೇಶ, ಹಿಂದೂ ಸಮಾಜವನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಇದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪಿಸಿದರು.




