ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ , ಉಪಾಧೀಕ್ಷಕ ಬಸವರಾಜ ಯಲಿಗಾರ, ಗೋಲಗುಂಬಜ್ ಸಿಪಿಐ ಮಲ್ಲಯ್ಯ ಮಠಪತಿ ರವರ ಮಾರ್ಗದರ್ಶನದಲ್ಲಿ ನಕಲಿ ಕ್ರಿಮಿನಾಶಕ ಜೌಷಧ ತಯಾರಿಕೆ ಮಾಡುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಎಪಿಎಮ್ಸಿ ಠಾಣೆ ಪಿಎಸ್ಐ ಬಸವರಾಜ.ಎ.ತಿಪರಡ್ಡಿ, ಮತ್ತು ಎಪಿಎಮ್ಸಿ ಠಾಣಾ ಸಿಬ್ಬಂದಿಗಳು ಹಾಗೂ ಅಮಗೊಂಡ ಪರಪ್ಪ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕರು ಜಂಟಿ ಕೃಷಿ ನಿರ್ದೇಶಕರ ಕಛೇರಿ ಮತ್ತು ರೇಷ್ಮಾ ಸುತಾರ ಸಹಾಯಕ ಕೃಷಿ ನಿರ್ದೇಶಕಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಇವರ ಜಂಟಿ ಕಾರ್ಯಾಚರಣೆಯಲ್ಲಿ ಅನಧೀಕೃತವಾಗಿ ನಕಲಿ ಕ್ರಿಮಿನಾಶಕ ಔಷಧಿಗಳ ತಯಾರಿಕಾ ಘಟಕದ ಮೇಲೆ ದಿನಾಂಕ: 11.09.2025 ರಂದು ಸಂಜೆ 4.30 ಗಂಟೆಯ ಸುಮಾರಿಗೆ ವಿಜಯಪೂರ ಕೆಐಎಡಿಬಿ ಸರ್ವೆ ನಂ: 1051/ಎ1/ಎ, ಪ್ಲಾಟ್ ನಂ: 279 ರಲ್ಲಿನ ಗೊಡಾವನದಲ್ಲಿ ದಾಳಿ ನಡೆಸಿ, ಆರೋಪಿತರಾದ ವಿದ್ಯಾಸಾಗರ ಚಿನ್ನಾರೆಡ್ಡಿ ಮಲ್ಲಾಬಾದಿ, ಸಾ|| ಕೊಂಡಗೂಳಿ ಹಾಗೂ ಅಮರ ಗುರುನಾಥ ರೆಡ್ಡಿ, ಸಾ|| ಬೊಳನಿ ತಾ|| ಆಳಂದಾ ಜಿ|| ಕಲಬುರ್ಗಿ ಎಂಬ ಆರೋಪಿತರು “ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೋಟೆಕ್ಷನ್” ಎನ್ನುವ ಕಂಪನಿಯ ಬೋರ್ಡ್ ಹಾಕಿಕೊಂಡು ಸದರಿ ಗೋಡಾವನಲ್ಲಿ “ಲೈಪ್ ಅಗ್ರೋ ಕೆಮಿಕಲ್” ಕಂಪನಿಯ ಹೆಸರಿನಲ್ಲಿ ತಾವೇ ತಯಾರಿಸಿದ ನಕಲಿ ಕ್ರಿಮಿನಾಶಕ ಔಷಧಗಳಿಗೆ “ಲೈಪ್ ಅಗ್ರೋ ಕೆಮಿಕಲ್” ಕಂಪನಿಯ ಲೇಬಲ್ಗಳನ್ನು ಅಂಟಿಸಿ, ಅನಧೀಕೃತವಾಗಿ ನಕಲಿ ಕ್ರಿಮಿನಾಶಕ ಔಷಧಗಳನ್ನು ತಯಾರಿಸಿ, ಗೋಡಾವನದಲ್ಲಿ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು, ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ ಆರೋಪಿತರಿಂದ ಸುಮಾರು 1,36,98,೫೨೩ ರೂ. ಮೌಲ್ಯದ “ಲೈಪ್ ಅಗ್ರೋ ಕೆಮಿಕಲ್” ಹೆಸರಿನಲ್ಲಿರುವ ನಕಲಿ ಕ್ರಿಮಿನಾಶಕ ಔಷಧಗಳನ್ನು ಜಪ್ತ ಮಾಡಿಕೊಳ್ಳಲಾಗಿದೆ. ಈ ಕುರಿತು ಎಪಿಎಮ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಜಂಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಕಲಿ ಕ್ರಿಮಿನಾಶಕ ಔಷಧಿಯನ್ನು ಜಪ್ತಿಪಡಿಸಿಕೊಳ್ಳುವಲ್ಲಿ, ಉತ್ತಮ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಎಸ್ಪಿ ನಿಂಬರಗಿ ಶ್ಲಾಘಿಸಿದ್ದಾರೆ.





