ದ್ರಾಕ್ಷಿ ಬೆಳೆ ವಿಮಾ ಮೊತ್ತ ಸಂದಾಯದಲ್ಲಿ ವಿಳಂಬವಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳನ್ನು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ಭೇಟಿ ಮಾಡಿ ದ್ರಾಕ್ಷಿ ಬೆಳೆ ವಿಮೆ ಕುರಿತು ಚರ್ಚಿಸಲಾಯಿತು. ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದು ದಿನಾಂಕ 25/11/2025 ರಂದು ಬೆಳೆ ವಿಮೆ ಸಮೀಕ್ಷೆಯ ಎಲ್ಲ ವರದಿಯನ್ನು ವಿಮಾ ಕಂಪನಿಗೆ ಕಳುಹಿಸಲಾಗುತ್ತಿದ್ದು, ಆದಷ್ಟು ಬೇಗನೆ ಡಿಸೆಂಬರ್ 5 ರ ಒಳಗಾಗಿ ರೈತರ ಖಾತೆಗಳಿಗೆ ಬೆಳ ವಿಮೆ ಮೊತ್ತವನ್ನು ಸಂದಾಯ ಮಾಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಯಾವುದೇ ಕಾರಣಕ್ಕೂ ರೈತರು ಯಾವುದೇ ರೀತಿಯಲ್ಲಿ ಗೊಂದಲಕ್ಕೆ ಒಳಗಾಗಬಾರದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಅಭಯಕುಮಾರ ನಾಂದೇಕರ, ಪ್ರಾದೇಶಿಕ ಕಚೇರಿ ವಿಜಯಪುರದ ಅಧ್ಯಕ್ಷರಾದ ಎಂ ಎಸ್ ಲೋಣಿ, ಪ್ರಧಾನ ಕಾರ್ಯದರ್ಶಿಗಳಾದ ಸಿದಗೊಂಡ ರುದ್ರಗೌಡರ, ಉಪಾಧ್ಯಕ್ಷರಾದ ಭರತೇಶ ಜಮಖಂಡಿ, ನಿರ್ದೇಶಕರುಗಳಾದ ಬಿ. ಸಿ. ಮಸಳಿ ಹಾಗೂ ರವಿಗೌಡ ಬಿರಾದಾರ, ಗುರು ಮಾಳಿ, ಮಲಕನಗೌಡ ರುದ್ರಗೌಡರ, ವಿಶ್ವನಾಥ ಅವಟಿ, ಮತ್ತು ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.



