ವಿಜಯಪುರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದ ವಿದ್ಯಾರ್ಥಿಗಳಿಗೆ ವಿಜಯಪುರದ ವೀರಶೈವ ಲಿಂಗಾಯತ ಭವನದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿಜಯಪುರ ನಗರ,ಇಂಡಿ, ಚಡಚನ, ತಿಕೋಟ, ಬಬಲೇಶ್ವರ, ತಾಳಿಕೋಟೆ, ಮುದ್ದೇಬಿಹಾಳ, ಸಿಂದಗಿ,ಆಲಮೆಲ್, ಕೋಲಾರ, ನಿಡಗುಂದಿ, ಬಾಗೇವಾಡಿಯ ರಾಧಿಕಾ ಕುಂಬಾರ್, ಅಕ್ಷತಾ ರೆಡ್ಡಿ, ರೋಹಿಣಿ ಪೂಜಾರಿ, ವಿಜಯಲಕ್ಷ್ಮಿ ಹೊಕ್ಕುಂಡಿ, ಸೂಫಿಯಾ ದಿಡ್ಡಿ ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ಮಾನವ ಬಂದುತ್ವ ವೇದಿಕೆಯಿಂದ ದೇವರಹಿಪ್ಪರಗಿ ತಾಲೂಕಿನ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಇದೆ ಸಂದರ್ಭದಲ್ಲಿ ಸೋಮಲಿಂಗ ಗೆನ್ನೂರು ಅಪರ್ ಜಿಲ್ಲಾಧಿಕಾರಿಗಳು ವಿಜಯಪುರ, ಯುಬಾಗಿ ಸಂಚಾಲಕರು ಪ್ರಭುಗೌಡ ಪಾಟೀಲ್, ತಾಲೂಕ್ ಸಂಚಾಲಕರು ಅಪ್ಪು ಮುಲ್ಲಾ, ವಿಜಯಪುರ ತಾಲೂಕು ಅಧ್ಯಕ್ಷರುಗಳು, ಮಹಿಳಾ ತಾಲೂಕು ಸಂಚಾಲಕರು, ಕಾರ್ಯಕರ್ತರು ಉಪಸ್ಥಿತರಿದ್ದರು.




