ವಿಜಯಪುರ, ಸೆಪ್ಟೆಂಬರ್ 22 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಕೆಲವು ತಾಲೂಕಿನಲ್ಲಿ ರೈತರ ಬೆಳೆ ಹಾನಿಯಾಗಿದ್ದು, ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಕುರಿತು ಕೈಗೊಂಡ ಜಂಟಿ ಸಮೀಕ್ಷೆಯಲ್ಲಿ ಯಾವುದೇ ಅರ್ಹ ರೈತರ ಜಮೀನು ಕೈಬಿಟ್ಟು ಹೋಗದಂತೆ ನಿಗಾವಹಿಸಿ ಸರ್ಮಪಕ ಸಮೀಕ್ಷೆ ನಡೆಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚಿಸಿದರು. ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದ
ಅವರು, ಬೆಳೆ ಹಾನಿ ಸಮೀಕ್ಷೆಯಲ್ಲಿ ಯಾವುದೇ ನಿರ್ಲಕ್ಷö್ಯ ವಹಿಸಬಾರದು. ನಿಮ್ಮ ಹಂತದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು

ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ತಹಶೀಲ್ದಾರರು ಖುದ್ದಾಗಿ ನಿಗಾ ವಹಿಸಬೇಕು. ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು
ಅವರು ಸೂಚನೆ ನೀಡಿದರು. ಸಮಗ್ರ ಹಾಗೂ ಸಂಪೂರ್ಣ ಸಮೀಕ್ಷಾ ವರದಿ ಸಿದ್ಧಪಡಿಸಬೇಕು. ಸಿದ್ಧಪಡಿಸಿದ ಸಮೀಕ್ಷೆ ಮಾಹಿತಿಯನ್ನು ಆಯಾ ಗ್ರಾಮ ಮಟ್ಟದಲ್ಲಿ
ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತರ ಅವಗಾಹನೆಗಾಗಿ ಪ್ರಚುರಪಡಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ರೈತರಿಗೆ ಕಾಲಾವಕಾಶ ನೀಡಿ, ಸ್ವೀಕೃತವಾದ ಆಕ್ಷೇಪಣೆಗಳನ್ನು
ಪುನರ್ಪರಿಶೀಲಿಸಿ, ಯಾವುದೇ ಅರ್ಹ ರೈತರ ಜಮೀನು ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಸಮೀಕ್ಷೆಯ ಪೂರ್ಣ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಹಿಂಗಾರು
ಹ0ಗಾಮು ಆರಂಭಕ್ಕೆ ಮುನ್ನ ಈ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ ಎಂದರು .



