ಇತ್ತೀಚೆಗೆ ವಿಜಯಪುರ ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಹಾಗೂ ಚಡಚಣ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಎಲ್ಲ ರಾಷ್ಟ್ರೀಕೃತ
ಖಾಸಗಿ ಬ್ಯಾಂಕ್ಗಳ ಮತ್ತು ಎಟಿಎಮ್ಗಳ ಹಾಗೂ ಸಹಕಾರಿ ಸಂಘಗಳ ಬ್ಯಾಂಕ್ಗಳು ಹಾಗೂ ಹಣಕಾಸು ಸಂಸ್ಥೆಗಳ ಭದ್ರತೆ ಕುರಿತು ಹಲವಾರು ಕ್ರಮಗಳನ್ನು ಕೈಕೊಳ್ಳಲು ಮುಂದಾಗಿದೆ.
ಬ್ಯಾಂಕಿಂಗ್ ವ್ಯವಸ್ಥೆಯು ದೇಶದ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿದ್ದು, ದೇಶದ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಜನಸಾಮಾನ್ಯರು ಸೇರಿದಂತೆ ರೈತರು, ಮಹಿಳೆಯರು, ನೌಕರರು, ಗೃಹ ಉದ್ಯೋಗ ನಡೆಸುವವರು, ಉದ್ದಿಮೆದಾರರು, ಬೃಹತ್ ಕಂಪನಿ,ಕೈಗಾರಿಕೆಗಳನ್ನೊಳಗೊಂಡಂತೆ ಎಲ್ಲಾ ವಲಯಗಳಲ್ಲಿ ದೈನಂದಿನ ಹಣಕಾಸು ವ್ಯವಹಾರ, ಬಂಡವಾಳ ಹೂಡಿಕೆ, ಖಾತೆಗಳ ನಿರ್ವಹಣೆ, ಅವಶ್ಯಕ ಸಂದರ್ಭಗಳಲ್ಲಿ ಬಂಗಾರ ಅಥವಾ ಆಸ್ತಿಗಳನ್ನು ಅಡಮಾನವಿಟ್ಟು, ಸಾಲ ಪಡೆದು ವ್ಯಾಪಾರ ವಹಿವಾಟು ನಡೆಸುವದರಿಂದ ಬ್ಯಾಂಕಿಂಗ್ ವ್ಯವಸ್ಥೆಯು ದೈನಂದಿನ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಬ್ಯಾಂಕಿಂಗ್ ನೀತಿಯು ಗ್ರಾಹಕರ ಮತ್ತು ಬ್ಯಾಂಕ್ಗಳ ನಡುವೆ ನಂಬಿಕೆಗೆ ಅರ್ಹವಾಗಿರುವಂಥದ್ದು. ಬ್ಯಾಂಕ್ಗೆ ಬರುವ ಗ್ರಾಹಕರೊಂದಿಗೆ ಉತ್ತಮ ಸಂಪರ್ಕವಿಟ್ಟುಕೊಂಡು ಅವರಿಗೆ ಹಣಕಾಸು ನಿರ್ವಹಣೆಯನ್ನು ಸುಲಭಗೊಳಿಸುವುದು, ಗ್ರಾಹಕರಿಂದ ಹೆಚ್ಚಿನ ಬಂಡವಾಳ ಸಂಗ್ರಹಣೆ, ಸಾಲ ಸೌಲಭ್ಯ, ಸಾಲ ಮರು ವಸೂಲಾತಿ, ಬಡ್ಡಿ ಸಂಗ್ರಹ ಇತ್ಯಾದಿ ಗುರಿಗಳನ್ನು ಹೊಂದಿರುವ ಬ್ಯಾಂಕ್ಗಳು ತಮ್ಮ ಬ್ಯಾಂಕಿಂಗ್ ನೀತಿಯಲ್ಲಿ ಗ್ರಾಹಕರು ಬ್ಯಾಂಕ್ಗಳ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡು ಹೋಗುವಲ್ಲಿ ಹಾಗೂ ಗ್ರಾಹಕರ ಹಿತದೃಷ್ಟಿಯನ್ನು ಕಾಪಾಡುವುದು, ಅವರು ಬ್ಯಾಂಕ್ಗಳಲ್ಲಿ ಕೂಡಿಟ್ಟ ಬಂಡವಾಳಕ್ಕೆ ಭದ್ರತೆ, ಕಷ್ಟಕಾಲಗಳಲ್ಲಿ ಅವರು ಅಡಮಾನವಿಟ್ಟ ಬಂಗಾರ ಇತ್ಯಾದಿಗಳ ಸುರಕ್ಷತೆಯೂ ಸಹ ಬ್ಯಾಂಕ್ಗಳ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ಗಳು ಕಳ್ಳತನ ಅಥವಾ ದರೋಡೆಯಂತಹ ಘಟನೆಗಳಿಗೆ ಒಳಗಾದಾಗ ಗ್ರಾಹಕರು, ಜನಸಾಮಾನ್ಯರು ಇಡೀ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.


ಹಲವು ರೈತರು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ಸ್ಥರದ ಜನರು ಕಷ್ಟಪಟ್ಟು, ಬೆವರು ಸುರಿಸಿ ಗಳಿಸಿದ ಹಣ, ಬಂಗಾರ ಇತ್ಯಾದಿಗಳನ್ನು ಬ್ಯಾಂಕ್ಗಳಲ್ಲಿ ಭದ್ರತೆಗಾಗಿ ಇಡುತ್ತಾರೆ. ಅವರ ಕಷ್ಟ ಕಾಲಗಳಲ್ಲಿ ಬ್ಯಾಂಕ್ಗಳ ಮೇಲೆ ವಿಶ್ವಾಸವಿಟ್ಟು, ಬ್ಯಾಂಕ್ಗಳಲ್ಲಿ ತಮ್ಮ ಬಂಗಾರವನ್ನು ಅಡವಿಟ್ಟು ಸಾಲ ಪಡೆದುಕೊಂಡು ಹಣಕಾಸು ನಿರ್ವಹಣೆ ಮಾಡುತ್ತಾರೆ. ಆದರೆ ಕೋಟಿಗಟ್ಟಲೆ ಬಂಡವಾಳ ಹೊಂದಿರುವ ಹಾಗೂ ಪ್ರತೀ ವರ್ಷ ಕೋಟಿಗಟ್ಟಲೆ ಲಾಭ ಗಳಿಸುವ ಬ್ಯಾಂಕ್ಗಳು ತಮ್ಮ ಗ್ರಾಹಕರ ಬಂಡವಾಳ, ಬಂಗಾರ ಹಾಗೂ ಇತ್ಯಾದಿಗಳ ಸುರಕ್ಷತೆ, ಭದ್ರತೆ ಕುರಿತು ನಿರ್ಲಕ್ಷ್ಯ ತೋರುತ್ತಿರುವುದು ಗ್ರಾಹಕರಲ್ಲಿ ಬ್ಯಾಂಕ್ಗಳ ಸುರಕ್ಷತಾ ಭಾವದ ಬಗ್ಗೆ ಪ್ರಶ್ನೆ ಮೂಡುವಂತಹ ಸಂದರ್ಭ ಸೃಷ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಬ್ಯಾಂಕ್ಗಳು ಆಬಿಐ ನಿರ್ದೇಶನಗಳನ್ನು ಹಾಗೂ ಪೊಲೀಸ್ ಇಲಾಖೆಯ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವುದು ಸಾರ್ವಜನಿಕರ/ಗ್ರಾಹಕರ ಹಿತದೃಷ್ಟಿಯಿಂದ ಅತ್ಯವಶ್ಯವಾಗಿದೆ.
“ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲು ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಸುರಕ್ಷತಾ ಭಾವ ತರುವುದರಲ್ಲಿ ಬ್ಯಾಂಕ್ ಮತ್ತು ಬ್ಯಾಂಕ್ ಅಧಿಕಾರಿಗಳ ಜವಾಬ್ದಾರಿ ಅತೀ ಮಹತ್ವದ್ದಾಗಿದೆ.” ಈ
ಹಿನ್ನೆಲೆಯಲ್ಲಿ ಈಗಾಗಲೇ ಹಲವು ಬಾರಿ ಬ್ಯಾಂಕ್ ಅಧಿಕಾರಿಗಳಿಗೆ ಪೊಲೀಸ್ ಠಾಣಾ ಮಟ್ಟದಲ್ಲಿ
ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಬಾರಿ ಬ್ಯಾಂಕ್ಗಳ Physical Security & Cyber
Security ಕುರಿತು ಸಭೆ ಕರೆದು ಚರ್ಚಿಸಲಾಗಿದೆ. ಅಲ್ಲದೇ Public Safety Act ಅಡಿ
ನೋಟಿಸ್ ಸಹ ನೀಡಲಾಗಿದೆ. ಆದರೂ ಸಹ ಬ್ಯಾಂಕ್ಗಳು ಕೈಗೊಂಡ ಸುರಕ್ಷತಾ ಕ್ರಮಗಳು
ತೃಪ್ತಿಕರವಾಗಿರುವುದಿಲ್ಲ.
“ಒಂದು ಬ್ಯಾಂಕಿನಲ್ಲಿ ಆದ ಘಟನೆಯನ್ನು ಅರಿತು, ತಿಳಿದುಕೊಂಡು ಸುರಕ್ಷತಾ ಕ್ರಮಗಳನ್ನು
ಕೈಗೊಳ್ಳುವವನೇ ಜಾಣನಾಗಿರುತ್ತಾನೆ. ಇಲ್ಲವೇ ಸ್ವಯಂ ಅನುಭವಕ್ಕೆ ಬಂದ ಮೇಲೆ ತೆಗೆದುಕೊಳ್ಳುವ
ಕ್ರಮಗಳಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೂ ಹಾಗೂ ಗ್ರಾಹಕರಿಗೂ ನಷ್ಟ.!”
ಈಗಾಗಲೇ ನಡೆದ ಕಳ್ಳತನ/ದರೋಡೆಯಂತಹ ಘಟನೆಗಳಿಂದ ಬ್ಯಾಂಕ್ಗಳು ಆಗಿರುವ
ಪ್ರಮಾದಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಅಂತಹ ಘಟನೆಗಳು ಮರುಕಳಿಸದಂತೆ ಎಲ್ಲ
ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯವಾಗಿದೆ. ಪೊಲೀಸ್ ಇಲಾಖೆಯು 24 X 7 x 365 ಸಮಯ ಸಾರ್ವಜನಿಕರ ಸೇವೆಯಲ್ಲಿರುತ್ತದೆ.
Prevention is better than Cure; ಎಂಬ ಧೈಯ ವಾಕ್ಯದಡಿ ಸಮಸ್ಯೆಗಳು ಬಂದಾಗ
ಪೊಲೀಸ್ ಇಲಾಖೆಯು ಖಂಡಿತವಾಗಿಯೂ ಗ್ರಾಹಕರ ಹಿತದೃಷ್ಟಿ, ಸಾರ್ವಜನಿಕರ ನಂಬಿಕೆಯನ್ನು
ಉಳಿಸುವಲ್ಲಿ ಕೆಲಸ ನಿರ್ವಹಿಸುತ್ತದೆ.



