ವಿಜಯಪುರ ನಗರದಲ್ಲಿ ಸೆ.13ರಂದು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ವಿಜಯ ಟೈಯರ್ಸ್ ಹತ್ತಿರ ವಾಹನ ತಡೆದು ವಿಚಾರಿಸಿ, ಒಟ್ಟು 210 ಕ್ವಿಂಟಲ್ 43 ಕೆಜಿ ರೂ 4.76.310 ಮೌಲ್ಯದ ಪಡಿತರ ಧಾನ್ಯವನ್ನು ಜಪ್ತಿಗೈದು, ಅಗತ್ಯ ವಸ್ತುಗಳ ಕಾಯ್ದೆ1955ರ ಮೇರೆಗೆ ಆದರ್ಶನಗರ ಪೋಲಿಸ್ ಠಾಣೆಯಲ್ಲಿ ಗಜಾನನ ಮಕಾಲೆ ಎನ್ನುವವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಈ ದಾಳಿಯಲ್ಲಿ ವಿಜಯಪುರ ನಗರದ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಆದರ್ಶನಗರ ಪಿಎಸ್ಐ ಸೀತಾರಾಮ ಲಮಾಣಿ ಸೇರಿದಂತೆ ಪೋಲಿಸ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿಗಳು ಈ ದಾಳಿಯಲ್ಲಿ ಭಾಗಿಯಾಗಿದ್ದರು.




