ನಿಡಗುಂದಿ. ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ತಾಲೂಕಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ದೇಶ, ನಾಡು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದಾರೆ. ಅವರು ದೇಶದ ಸನಾತನ ಧರ್ಮದ ಪ್ರಚಾರದ ಜತೆಗೆ ರೈತರಿಗೆ ಅನುಕೂಲವಾಗುವ ಅನೇಕ ಕೃಷಿ ಚಟುವಟಿಕೆಗಳನ್ನು ಹಾಗೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಅವರ ವ್ಯಕ್ತಿತ್ವ ಅನೇಕ ಜರಿಗೆ ಮಾದರಿಯಾಗಿದೆ. ಇಂತಹ ಪುಣ್ಯ ಪುರುಷರಿಗೆ ಜಿಲ್ಲಾಡಳಿತ ಜಿಲ್ಲಾ ಪ್ರವೇಶ ನಿರ್ಬಂಧ ಹೇರಿದ್ದು ನೋವಿನ ಸಂಗತಿ, ಮುಖ್ಯಮಂತ್ರಿಗಳು ಕೂಡಲೇ ಈ ನಿರ್ಬಂಧವನ್ನು ತೆರವುಗೊಳಿಸಲು ವಿಜಯಪುರ ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಬಸವನಬಾಗೇವಾಡಿಯ ಅಭಿಯಾನಂದ ಶ್ರೀಗಳು, ಋಷಿಯಾನಂದ ಶ್ರೀಗಳು, ಅರವಿಂದ ಗುರೂಜಿ, ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಡಾ.ಸಂಗಮೇಶ ಗೂಗಿಹಾಳ, ಈರಣ್ಣ ಗೋನಾಳ, ಸಂತೋಷ ಕಡಿ, ಗಣೇಶ ಕೂಚಬಾಳ, ಬಾಲಚಂದ್ರ ನಾಗರಾಳ, ಮುತ್ತು ಕಾಜಗಾರ, ಪ್ರದೀಪ ಪಾರಶೆಟ್ಟಿ, ಶರಣು ಮುರನಾಳ, ರಾಜು ನದಾಫ್, ಹನುಮಂತರಾಯ ಗುಡದಿನ್ನಿ, ಮಲಕಾಜಪ್ಪ ಕೆಂಭಾವಿ, ಶಾಂತಪ್ಪ ಮನಗೂಳಿ, ಶಿವಾನಂದ ಧನಶೆಟ್ಟಿ, ಕಾಂತು ಬಾದೋಡಗಿ ಇತರರಿದ್ದರು.



