ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಆಶ್ರಯದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ಯೋಗಾಪುರ್ ಹನುಮಾನ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿಸಲಾಯಿತು. ನಂತರ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ನರೇಂದ್ರ ಮೋದಿ ನಾವು ಕಂಡ ಅದ್ಭುತ ಜನನಾಯಕ, ಕೇವಲ ಜನಸೇವೆಯನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡು ಹೋರಾಟ ಹಾಗೂ ದಿವ್ಯ ದೇಶ ಭಕ್ತಿಯ ಮೂಲಕ ಈ ದೇಶದ ಚುಕ್ಕಾಣಿ ಹಿಡಿದಿರುವ ಈ ಅವಧಿಯಲ್ಲಿ ಭಾರತ ಅಭಿವೃದ್ಧಿಯಲ್ಲಿ ನಾಗಾಲೋಟ ಬೀರುತ್ತಿದೆ, ಮೊನ್ನೆಯಷ್ಟೇ ಜೀವನಾವಶಕ ವಸ್ತುಗಳನ್ನು ಜಿಎಸ್ಟಿಯ ಪರಿಧಿಯಲ್ಲಿ ಹೊರಗಿಡುವ ಮೂಲಕ ದೊಡ್ಡ ಕೊಡುಗೆ ಕೊಟ್ಟಿದ್ದಾರೆ, ಕಪ್ಪುಹಣದ ಸಮರ ಸೇರಿದಂತೆ ಅನೇಕ ದಿಟ್ಟ ಹೆಜ್ಜೆಗಳನ್ನು ಇರಿಸಿದ ಮೋದಿ ನಮ್ಮ ಹೆಮ್ಮೆಯ ನಾಯಕ ಎಂದರು.

ಇದೆ ವೇಳೆ ಪಕ್ಷದ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ್ ಕವಟಗಿ, ಮುಖಂಡ ವಿಜುಗೌಡ ಪಾಟೀಲ್, ಡಾ.ಸುರೇಶ್ ಬಿರಾದಾರ್,ಎಸ್.ಸಿ.ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ್, ಸಂಜೀವ ಐಹೊಳೆ, ಮಹೇಂದ್ರ ನಾಯಕ್ ಭೀಮ್ ಸಿಂಗ್ ರಾಥೋಡ್, ಉಮೇಶ ಕೋಳಕುರ, ಮಲ್ಲಿಕಾರ್ಜುನ್ ಜೋಗುರ್, ಮಲ್ಲು ಕಲಾದಗಿ, ಸಾಬು ಮಶ್ಯಾಳ, ಡಾ॥ವಿರೇಶ ಪಾಟೀಲ, ಈರಣ್ಣ ರಾವೂರ, ಡಾ|| ಅರಿವಿಂದ ಡಾಣಕಶಿರೂರ ,ಡಾ||ಅಶೋಕ ವಾಲಿ, ವಿಜು ಜೋಶಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



