ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಟೌನ್ ವಾಸಿ ಆದ ಕೆ ಟಿ ಕುಮಾರ್ ಸ್ವಾಮಿ ರವರು ವಾಲ್ಮೀಕಿ ಸಮುದಾಯದ ವಾರಗಿದ್ದು, ಮಾಜಿ ಸಚಿವ ತಿಪ್ಪೇಸ್ವಾಮಿ ರವರ ಸುಪುತ್ರರು ಇವರ ತಂದೆ ವಾಲ್ಮೀಕಿ ಪೀಠ ದ ಸಂಸ್ಥಾಪಕರು ಆಗಿದ್ದು ಚಳ್ಳಕೆರೆ ತಾಲೂಕಿನ ಹಳ್ಳಿ ಹಳ್ಳಿ ಮತ್ತು ಚಿತ್ರದುರ್ಗ ಜಿಲ್ಲೆಗೆ ಹೆಸರು ವಾಸಿ ಆಗಿದ್ದರು ತಂದೆ ಯ ವೃತ್ತಿ ನಂತರ ಮೊದಲ ಬಾರಿ ಕೆಜೆಪಿ ಪಕ್ಷ ದಲ್ಲಿ ನಿಂತು ಸೋತರು.


ತದ ನಂತರ ಕೆ ಟಿ ಕುಮಾರ್ ಸ್ವಾಮಿ ರವರು ಬಿಜೆಪಿ ಪಕ್ಷ ದಿಂದ ನಿಂತು ಕೆಲವೇ ಅಂತರದಲ್ಲಿ ವಿಫಲರಾದರು ಇದಾದ ಬಳಿಕ ಹಿಂದಿನ ವಿಧಾನ ಸಭಾ ಚುನಾವಣೆ ಯಲ್ಲಿ ಕಾರಣಾಂತರ ಗಳಿಂದ ಟಿಕೇಟ್ ನೀಡಿಲ್ಲ ಎಂದು ಎದೆಗುಂದದೆ ಪಕ್ಷೇತರ ಅಭ್ಯರ್ಥಿ ಆಗಿ ತೆಂಗಿನ ಕಾಯಿ ಗುರುತಿಗೆ ನಿಂತು ಶಾಸಕ ಟಿ ರಘು ಮೂರ್ತಿ ರವರಿಗೆ ಭಯದ ವಾತಾವರಣ ಸೃಷ್ಟಿ ಸಿ ಜನಗಳ ಹೃದಯ ಗೆದ್ದರು ಕೊನೆ ಗಳಿಗೆ ಯಲ್ಲಿ ಅಂತರದಲ್ಲಿ ಸೋಲನ್ನು ಅನುಭವಿಸಿದರು ಇದಾದ ನಂತರ ಸಂಸದ ರಾದ ಗೋವಿಂದ ಕಾರಜೋಳ ರವರು ಬಿಜೆಪಿ ಪಕ್ಷ ಕ್ಕೆ ಸೇರಿಸಿಕೊಂಡು ಪಕ್ಷದ ಜವಾಬ್ದಾರಿ ಕೊಟ್ಟರು ಹಾಗೆಯೇ ಯುವಕರ ಆಶಾಕಿರಣ ಮತ್ತು ಸದಾ ಕಾಲ ಚಾಲ್ತಿಯಲ್ಲಿ ಇರುವವರು ಹಾಗೂ ಎಲ್ಲಾ ಜಾತಿ ಧರ್ಮ ದವರು ಹಾಗೂ ಮುಸ್ಲಿಮ್ ಸಮುದಾಯದ ವರಿಗೆ ಎಲ್ಲಾರ ಜೊತೆಗೆ ಹೊಂದುಕೊಳ್ಳುವ ಕೆ ಟಿ ಕುಮಾರ್ ಸ್ವಾಮಿ ರವರು ಎಲ್ಲರ ಹೃದಯ ಗೆಲ್ಲುತ್ತ ಮುನ್ನುಗುತ್ತಿದ್ದಾರೆ ಎಂದು ಆಶಿಸುತ್ತ ಮುಂದಿನ ದಿನಗಲ್ಲ ಬಿಜೆಪಿ ಪಕ್ಷ ವನ್ನ ಬಲ ಪಡಿಸಲು ಹಾಗೂ ಚುನಾವಣೆ ಯಲ್ಲಿ ಅಭ್ಯರ್ಥಿ ಗಳ್ನನ ಗೆಲುವು ಸಾಧಿಸಲು ಯಶಸ್ವಿ ಆಗುತ್ತಾರೆ ಎನ್ನುವ ವಿಶ್ವಾಸ ಇಟ್ಟುಕೊಂಡು ಆ ದೃಷ್ಟಿ ಇಂದ ಬಿಜೆಪಿ ಪಕ್ಷವು ಯುವ ಕಣ್ಮಣಿ ಆದ ಕೆ ಟಿ ಕುಮಾರ್ ಸ್ವಾಮಿ ರವರನ್ನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ರವರು ಆದೇಶ ರವಾನೆ ಮಾಡಿದ್ದಾರೆ, ಈ ಸಂದರ್ಭದಲ್ಲಿ ಚಳ್ಳಕೆರೆ ಮುಸ್ಲಿಮ್ ಸಮಾಜದ ಯುವ ಮುಖಂಡರು ಹಾಗೂ ರಕ್ಷಣಾ ವೇದಿಕೆ ಯುವ ಅಧ್ಯಕ್ಷರು ಆದ ಸಯ್ಯದ್ ನಬಿ ಮತ್ತು ಸ್ನೇಹಿತರು ಅಭಿನಂದಿಸಿದರು.



