ಸ್ವಾಮೀಜಿಗಳು ಮಾಡುವಂತಹ ಕೆಲಸ ಸ್ವಾಮೀಜಿಗಳು ಮಾಡಬೇಕು. ಟ್ರಸ್ಟ್ ಹಾಗೂ ಸ್ವಾಮೀಜಿ ನಡುವೆ ರಾಜಕೀಯ ನಡೆಯುತ್ತಿದೆ. ರಾಜಕೀಯ ಕಾರಣಕ್ಕಾಗಿ ವಿವಾದ ನಡೆಯುತ್ತಿದೆ. ಸ್ವಾಮೀಜಿಗಳು ಮೊದಲು ಹೇಗಿದ್ದರೂ ಹಾಗೇ ಇದ್ದರೆ ಒಳ್ಳೆಯದು. ರಾಜಕೀಯ ನಾಯಕರ ಬೆನ್ನತ್ತಿ ಸ್ವಾಮೀಜಿ ರಾಜಕೀಯ ಮಾಡ್ತಾಯಿದ್ದಾರೆ ಎಂದು ವಿಜಯಪುರ ನಗರದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಜಯಮೃತ್ಯುಂಜಯ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದರು.




