ಬೆಂಗಳೂರಿನಲ್ಲಿ ಲೋಕಾಯುಕ್ತ ಪೋಲೀಸರ ಭರ್ಜರಿ ಭೇಟೆ. 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಅಬಕಾರಿ ಡಿಸಿ ಯನ್ನು ಬಂಧಿಸಿದ್ದಾರೆ. ಬ್ಯಾಟರಾಯನಪುರದ ಅಬಕಾರಿ ಕಚೇರಿಯಲ್ಲಿ ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಅರೆಸ್ಟ್ ಆಗಿದ್ದಾರೆ.ಮೈಕ್ರೋ ಬ್ರಿವೇರಿ, CL 7 ಲೈಸನ್ಸ್ ಗೆ 75 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಮೊದಲ ಕಂತಿನ 25 ಲಕ್ಷ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿಗೈದಿದ್ದಾರೆ. ಅಬಕಾರಿ ಡಿಸಿ ಜಗದೀಶ್ ನಾಯ್ಕ್, ಅಧೀಕ್ಷಕ ತಮ್ಮಣ್ಣ, ಹಾಗೂ ಕಾನ್ಸ್ಟೇಬಲ್ ಲಕ್ಕಪ್ಪ ನನ್ನು ಬಂದಿಸಲಾಗಿದೆ.




