ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಾಬಾನಗರದ ಹತ್ತಿರ ನಿರ್ಮಿಸಲುದ್ದೇಶಿಸಿರುವ ಜಲ ಸಂಗ್ರಹಗಾರದ ಸ್ಥಳ ವೀಕ್ಷಿಸಿದ ಉಸ್ತುವಾರಿ ಸಚಿವ ಎಂ ಬಿ ಪಾಟೀಲ. ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ತುಬಚಿ ಬಬಲೇಶ್ವರ ಯೋಜನೆಯನ್ನ ನಾನು ಬೃಹತ್ ನಿರಾವರಿ ಸಚಿವನಾದಾಗ 2013 ರಿಂದ 2018 ಈ ಯೋಜನೆಗೆ ಈ ಭಾಗದ ಅತೀ ಎತ್ತರದ ಪ್ರದೇಶ ಅಂದರೆ 640 ಕ್ಕಿಂತ ಮೇಲ್ಪಟ್ಟರುವಂತಹದ್ದು. ಕನಮಡಿ,ಬಿಜ್ಜರಗಿ, ಬಾಬಾನಗರ, ಅಳಗಿನಾಳ ಮತ್ತು ತಿಕೋಟಾ ತಾಲ್ಲೂಕು ಹಾಗೂ ಸಾವಳಗಿ ತಾಲೂಕು 1 ಲಕ್ಷದ 30 ಸಾವಿರ ಎಕರೆ ಸುಮಾರು 6.8 ಟಿಎಂಸಿ ನೀರು ಮಾಡಿರುವಂತಹ ಯೋಜನೆ. ಇದಕ್ಕೆ 3 ಸಾವಿರದ 600 ಕೋಟಿ ರೂಪಾಯಿ ವೆಚ್ಚ ಮಾಡಿದ್ದು. ಈಗಾಗಲೇ FIC ಟೆಂಡರ್ ಆಗಿ ಕೆಲಸ ನಡೆಯುತ್ತಿದೆ. ಇನ್ನೂ ಆರು ತಿಂಗಳಲ್ಲಿ FIC ಟೆಂಡರ್ ಮುಗಿದು ರೈತರ ಹೊಲಗಳಿಗೆ ನೀರು ಕೊಡುತ್ತೇವೆ ಎಂದರು.
ಇದೇ ವೇಳೆ ಬಿಜ್ಜರಗಿ ಗ್ರಾಮದ ಹಿರಿಯರಾದ ರಾಮನಿಂಗಪ್ಪ ಮಸಳಿ, ಮಲ್ಲಿಕಾರ್ಜುನ ಗುಣಕಿ, ಬಾಬಾನಗರ ಪಂಚಾಯತ್ ಸದಸ್ಯ ಸಿದ್ದಗೊಂಡ ರುದ್ರಗೌಡರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೋಮನಾಥ ಬಾಗಲಕೋಟ, ಸಿದ್ದು ಗೌಡನ್ನವರ, ಯುವ ಮುಖಂಡರಾದ ವಿರೇಶ ಸಿಂಧೂರ, ಮಂಜುನಾಥ ಹುನ್ನೂರ, ಕುಮಾರ ಚಡಚಣ, ಬಾಳು ಬಸವನ್ನವರ, ಉಮೇಶ ಮಾಳಿ, ಚಂದು ಕೋಳಿ, ಚನ್ನಯ್ಯ ಮಠಪತಿ, ಅಶೋಕ ಧನ್ಯಾಳ ಸೇರಿದಂತೆ ಮತ್ತಿತರರಿದ್ದರು.
VIDEO LINK 👇🏻



