ವಿಜಯಪುರ ಜಿಲ್ಲೆಯ ಜಿಲ್ಲೆಯ ಮಾಜಿ ಸಚಿವರು, ಮಾಜಿ ಶಾಸಕರು,
ವಿಜಯಪುರ ಜಿಲ್ಲೆಯ ಜನಪ್ರಿಯ ಸಂಸದರು ಮಾಜಿ ಕೇಂದ್ರ ಸಚಿವರಾದ ರಮೇಶ್ ಜಿಗಜಿಣಿಗಿ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಜಿಲ್ಲೆಯ ಮಾಜಿ ಸಚಿವರು, ಮಾಜಿ ಶಾಸಕರು, ಗಣ್ಯರು, ಸನ್ಮಾನ್ಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಆಪರೇಷನ್ ಸಿಂಧೂರ್ ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಆಡಳಿತ ತೆಗೆದುಕೊಳ್ಳುವ ಎಲ್ಲ ಸುರಕ್ಷಾ ಹಾಗೂ ಅಗತ್ಯ ಕ್ರಮಗಳಿಗೆ ಜೊತೆಗಿರುವದಾಗಿ ತಿಳಿಸಿದರು, ಸ್ವತಃ ಸಂಸದರು ಹಾಗೂ ಅವರ ಜೊತೆಗಿರುವ ಹಲವಾರು ಜನ ಕಾರ್ಯಕರ್ತರು ಸೇರಿದಂತೆ ಸ್ವಯಂಸೇವಕರಾಗಿ ಈ ಸಂದರ್ಭದಲ್ಲಿ ಕೆಲಸ ಮಾಡಲು ಸಿದ್ಧವಿರುವದಾಗಿ ತಿಳಿಸಿದರು .
ವಿಜಯಪುರ ಜಿಲ್ಲೆಯಲ್ಲಿ ಆಹಾರ ಹಾಗೂ ಇಂಧನ ಹಾಗೂ ಅಡುಗೆ ಅನಿಲ ಹಾಗೂ ಎಟಿಎಂಗಳಲ್ಲಿ ಹಣದ ಲಭ್ಯತೆ ಹಾಗೂ ಸುರಕ್ಷಾ ಕ್ರಮಗಳು ಕುರಿತು ಸುಧೀರ್ಘವಾಗಿ ಚರ್ಚಿಸಿ ತಿಳಿಸಿದರು , ಪಾಕಿಸ್ತಾನದ ಅನಧಿಕೃತ ಪ್ರಜೆಗಳು ಹಾಗೂ ಬಾಂಗ್ಲಾದೇಶದ ಅನಧಿಕೃತ ಪ್ರಜೆಗಳನ್ನು ಗುರುತಿಸಿ ಅವರನ್ನು ಹೊರ ಹಾಕುವ ಕುರಿತು ಕೈಗೊಂಡ ಕ್ರಮದ ಕುರಿತು ಹಾಗೂ ಜಿಲ್ಲೆಯ ಸುರಕ್ಷತಾ ಸ್ಥಿತಿಗತಿಯ ಕುರಿತು ಚರ್ಚಿಸಲಾಯಿತು
ಆ ಮೂಲಕ ಇಡೀ ಜಿಲ್ಲೆಯ ಜನತೆಗೆ ಎಂಥದೆ ಸಂದರ್ಭ ಬಂದರೂ ಎದುರಿಸಲು ಸನ್ನದ್ಧರಾಗುವ , ಅಗತ್ಯ ಬಿದ್ದರೆ ಸಾಮಾನ್ಯ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವ ಸಂದೇಶವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ , ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕರಾದ ರಮೇಶ್ ಭೂಸನೂರ್ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಕರ ಕವಟಗಿ, ಉಮೇಶ್ ಕಾರಜೋಳ್ ಸಂಜೆ ಐಹೊಳೆ ಮಳುಗೌಡ ಪಾಟೀಲ, ಈರಣ್ಣ ರಾವೂರ್ ಸಂಜಯ ಪಾಟೀಲ ಕನಮಡಿ, ಸುರೇಶ್ ಬಿರಾದಾರ್, ಭೀಮಾಶಂಕರ ಹದನೂರ, ಎಸ್. ಎ .ಪಾಟೀಲ್ , ವಿಜಯ ಜೊಶಿ, ರಾಜೇಶ ತವಸೆ, ಸಂದೀಪ ಪಾಟೀಲ, ಜಗದೀಶ್ ಮುಚ್ಚಂಡಿ , ಸಂಪತ್ ಕುವಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

