ಚಳ್ಳಕೆರೆ ನಗರದ ಟೌನ್ ನಲ್ಲಿ ಶಾಸಕ ಟಿ ರಘು ಮೂರ್ತಿ ರವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು, ನಗರದ ನಗರ ಸಭೆ ಕಟ್ಟಡ ನಿರ್ಮಾಣಕ್ಕೆ ಸುಮಾರು 4 ಕೋಟಿ ರೂ. ವೆಚ್ಚದ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಉದ್ಘಾಟಿಸಿದರು. ನಂತರ ಖಾಸಗಿ ಬಸ್ಟ್ಯಾಂಡ್ ಪೂಜೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ನೆರವೇರಸಿ ಮಾತನಾಡಿದ ಶಾಸಕ ಟಿ ರಘು ಮೂರ್ತಿ, ನಾನು ಶಾಸಕನಾಗಿ ಇರೋವರೆಗೂ ಚಳ್ಳಕೆರೆ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡುವುದೇ ನನ್ನ ಮೊದಲ ಆಧ್ಯತೆ. ನಾನು ಜಾಸ್ತಿ ಮಾತನಾಡಲು ಹೋಗೋದಿಲ್ಲ ನನ್ನ ಮಾತು ಬರೀ ಕೆಲಸದ ಮಾತಾಗಿರುತ್ತದೆ, ಚಳ್ಳಕೆರೆಯನ್ನ ಇನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದೇ ನನ್ನ ಆಸೆಯಾಗಿದೆ. ನನಗೆ ಸರ್ಕಾರವು ಹೆಚ್ಚಿನ ಅನುದಾನ ನೀಡಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿ ಸರ್ಕಾರದತ್ತ ಗಮನ ಸೆಳೆದರು.

ಇದೆ ವೇಳೆ ನಗರ ಸಭೆ ಅಧ್ಯಕ್ಷೆ ಶಿಲ್ಪಾ ಮುರಳೀಧರ, ಉಪಾಧ್ಯಕ್ಷೆ ಕವಿತಾ ವೀರೇಶ್, ನಗರ ಸಭೆ ಸದಸ್ಯ ರಮೇಶ್ ಗೌಡ, ಸುಜಾತ ಪಾಲಣ್ಣ, ಗೋವಿಂದ ಹೊಯ್ಸಳ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ ಮಲ್ಲಿಕಾರ್ಜುನ, ಮಾಜಿ ಅಧ್ಯಕ್ಷ ಜೈತುನ್ ಬಿ ಮಲಿಕ್ ಸಾಬ್ ಖಾದರ್, ಆರ್ ಪ್ರಸನ್ನ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಯುವ ಅಧ್ಯಕ್ಷ ಸಯ್ಯದ್ ನಬಿ ಸೇರಿದಂತೆ ಮತ್ತಿತರರಿದ್ದರು.




