ಬಬಲೇಶ್ವರದಲ್ಲಿ ನಮ್ಮ ಸಮಾವೇಶ ಮಾಡುತ್ತಿದ್ದೇವೆ ಎಂದರೆ ಉಸ್ತುವಾರಿ ಸಚಿವ ಎಂ ಬಿ ಪಾಟೀಲರ ಚಾಲೆಂಜ್ ಅನ್ನು ಸ್ವೀಕಾರ ಮಾಡುತ್ತಿದ್ದೇವೆ. ಅವರು ನಮ್ಮ ಹತ್ತು ಪಟ್ಟು ಜನರನ್ನು ಸೇರಿಸುತ್ತೇನೆ ಎಂದಿದ್ದಾರೆ. ಇವತ್ತು ನಾವು ಸನಾತನ ಧರ್ಮ, ಧರ್ಮದ ರಕ್ಷಣೆಗಾಗಿ ವೀರಶೈವ ಮತ್ತು ಲಿಂಗಾಯತರು ಒಂದೇ ಅನ್ನುವಂತೆ ಸಂದೇಶ ಸಾರುತ್ತೇವೆ. ಬಬಲೇಶ್ವರದಲ್ಲೇ ನಮ್ಮ ಬಸವಾದಿ ಬ್ರಹ್ಮತರ ಹಿಂದೂ ಸಮಾವೇಶ ಪ್ರಾರಂಭ ಮಾಡುತ್ತೇವೆ. ಎಲ್ಲಾ ತಾಲ್ಲೂಕಿನಲ್ಲಿ ಹಿಂದೂಗಳು, ವೀರಶೈವ ಲಿಂಗಾಯತ ಮಾಡುತ್ತಾರೆ. ನಾವು ದಾವಣಗೆರೆಯಲ್ಲಿ ವಿರಾಟ ಹಿಂದೂ ಸಮಾವೇಶ ಮಾಡುವುದರ ಮೂಲಕ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ಕೆಡುತ್ತೇವೆ. ಇನ್ನೂ ಮುಂದೆ ಹಿಂದೂಗಳ ಬಗ್ಗೆ ವೀರ ಶೈವ ಲಿಂಗಾಯತರ ಬಗ್ಗೆ ಯಾರೇ ಸ್ವಾಮೀಜಿ ಮಾತನಾಡಿದ್ರು, ಯಾರೇ ರಾಜಕಾರಣಿ ಮಾತನಾಡಿದ್ರೆ ಅವರಿಗೆ ಅವರದೇ ಭಾಷೆಯಲ್ಲಿ ಉತ್ತರ ಕೊಡುತ್ತೇವೆ. ಬಸವಣ್ಣ ಅವರ ವಿಚಾರ ಇಟ್ಟುಕೊಂಡು ಬಲಿಹಾಕೋ ಬ್ಯಾಡ್ರಿ, ಮಾಂಸ ತಿನ್ನರಿ, ದಾರು ಕುಡಿರಿ, ಆ ಮಠಾದೀಶರಿಗೆ ಅಣ್ಣ ಬಸವಣ್ಣನವರು ಹೇಳಿದ್ದಾರೆ. ಯಾವುದೇ ಸ್ವಾಮಿಗಳಿಗೆ ಕಾಲು ಮುಗಿಯಬಾರ್ದು, ಪಾದ ಪೂಜೆ ಮಾಡಿಸಬಾರದು ಇಲ್ಲಿ ಬಸವಣ್ಣನ ಹೆಸರು ಹೇಳಿ ನಾಟಕ ಮಾಡುವುದನ್ನು ಬಿಡಬೇಕು. ಸನಾತನ ಧರ್ಮದ ವಸ್ತ್ರ ಹಾಕಬಾರದು. ಯಾರ್ಯಾರು ಇಸ್ಲಾಂ ಮತ್ತು ಲಿಂಗಾಯತರು ಒಂದೇ ಎನ್ನುವರು ಅವರು ಹಸಿರು ವಸ್ತ್ರ ಹಾಕೊಳ್ಳಿ ಎಂದು ವಿಜಯಪುರದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.




