ಇಸ್ರೇಲ್, ಅಮೆರಿಕ, ಯುರೋಪಿಯನ್ ಒಕ್ಕೂಟ, ಕೆನಡಾ, ಈಜಿಪ್ಟ್ ಮತ್ತು ಜಪಾನ್ ಹಮಾಸ್ ಅನ್ನು ಜಾಗತಿಕವಾಗಿ ಉಗ್ರ ಸಂಘಟನೆ ಎಂದು ಘೋಷಿಸಿವೆ. ಬಾಗಲಕೋಟೆ ಪಂಕಾ ಮಸೀದಿಯಲ್ಲಿ ಈದ್ ಮಿಲಾದ್ ಹಿನ್ನೆಲೆ ಅಳವಡಿಸಲಾಗಿದ್ದ ಕಟೌಟ್ ನಲ್ಲಿ ಹಮಾಸ್ ಉಗ್ರರ ನಾಯಕರ ಭಾವಚಿತ್ರ ಅಳವಡಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಉಗ್ರರ ಭುಜದ ಮೇಲೆ ಪ್ಯಾಲಿಸ್ತೀನ್ ಧ್ವಜ ಇರುವ ಭಾವಚಿತ್ರ ಹಾಕಲಾಗಿದ್ದು, ವಿಷಯ ಗೊತ್ತಾಗುತ್ತಿದ್ದಂತೆ ಪ್ಯಾಲಿಸ್ತೀನ್ ಧ್ವಜದ ಮೇಲೆ ಹಸಿರು ಬಟ್ಟೆ ಅಂಟಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ, ಈ ಕುರಿತು ಹಿಂದೂ ಪರ ಸಂಘಟನೆಗಳಿಂದ ಶಹರ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.




