ಮುದ್ದೇಬಿಹಾಳ ಹಾಗೂ ತಾಳಿಕೋಟಿ ಪಟ್ಟಣಗಳಲ್ಲಿ ಅನಧೀಕೃತವಾಗಿ ಮಾವಾ ತಯಾರಿಕೆ ಹಾಗೂ ಮಾರಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ,ರವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿಎಸ್ಪಿ ಸುನೀಲ ಕಾಂಬಳೆ, psi ರವಿ ಯಡವನ್ನವರ, ಎಎಸ್ಐ ಗಳಾದ ಬಿ.ಎಮ್. ಪವಾರ, ವಾಯ್.ಎಸ್.ಜಮಖಂಡಿ ಹಾಗೂ ಸಿಬ್ಬಂದಿ ಪಿ.ಎಮ್.ಟಕ್ಕೋಡ, ಎಸ್.ಬಿ.ಬಿರಾದಾರ, ಆರ್.ಐ.ಲೋಣಿ, ಆರ್.ಡಿ.ಅಂಜುಟಗಿ, ಅಬುಬಕರ ಗದ್ಯಾಳ, ಡಿ.ಆರ್.ಪಾಟೀಲ, ಎಸ್.ಆರ್.ಬಡಚಿ ರವರನ್ನು ಒಳಗೊಂಡ ತಂಡಗಳು ದಾಳಿ ನಡೆಸಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇಬಿಹಾಳ ಪಟ್ಟಣದ ಸಂಗಮೇಶ್ವರ ನಗರದಲ್ಲಿ ಆರೋಪಿತರಾದ ಸಲಿಂ ಖುದಾನಸಾಬ ಪಡೇಕನೂರ, ರಮೇಶ ಗಣಪ್ಪ ಪೂಜಾರಿ,ಇವರುಗಳಿಂದ ಮಾನವ ಸೇವನೆಗೆ ಹಾನಿಕಾರಕವಾದ, ಅನಧೀಕೃತವಾಗಿ ತಯಾರಿಸಿದ 14 ಕೆಜಿ ಕಚ್ಚಾ ಮಾವಾ ಅಂದಾಜು 11,200 ರೂ. ಮೌಲ್ಯದ, 5.175 ಕೆಜಿ ತಯಾರಿಸಿದ ಮಾವಾ (207 ಪ್ಯಾಕೇಟ್ಗಳು) ಅಂದಾಜು 6,210 ರೂ. ,ಅಡಿಕೆ ಚೂರು 12 ಕೆಜಿ ಅಂದಾಜು 3,600 ರೂ. ಮೌಲ್ಯದ, ತಂಬಾಕು 5.8 ಕೆಜಿ ಅಂದಾಜು 5,800 ರೂ. ಮೌಲ್ಯದ, ಸುಣ್ಣದ ಡಬ್ಬಿ 300 ಗ್ರಾಂ ಅಂದಾಜು 30 ರೂ. ಮೌಲ್ಯದ, ಮಿಕ್ಸರ್ ಯಂತ್ರ – 1 ಅಂದಾಜು 500 ರೂ. ಮೌಲ್ಯದ ,ಡಿಜಿಟಲ್ ತೂಕದ ಯಂತ್ರ – 1 ಅಂದಾಜು 500 ರೂ. ಮೌಲ್ಯದ, ಹೀಗೆ ಒಟ್ಟು ರೂ. 27,840/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಳಿಕೋಟಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಕೋಟಿ ಪಟ್ಟಣದ ಖತ್ರಿ ಬಜಾರ ಹತ್ತಿರ ಆರೋಪಿತನಾದ ಮಹಮ್ಮದರಸೂಲ್ ಮಹಿಬೂಬಸಾಬ ಮಮದಾಪೂರ ಇತನಿಂದ 5.5 ಕೆಜಿ ತಯಾರಿಸಿದ ಮಾವಾ (220 ಪ್ಯಾಕೇಟ್ಗಳು) ಅಂದಾಜು ಮೌಲ್ಯ: 4,400/- 45 ಕೆಜಿ ತಂಬಾಕು ಅಂದಾಜು ಮೌಲ್ಯ: 22,500/- ,31 ಕೆಜಿ ಅಡಿಕೆ ಚೂರು ಅಂದಾಜು ಮೌಲ್ಯ: 12,400/- , ನಗದು ಹಣ 12,328/- ಹೀಗೆ ಒಟ್ಟು ರೂ. 51,628/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸದರಿ ಎರಡು ಪ್ರಕರಣಗಳಲ್ಲಿ ಒಟ್ಟು 118.4 ಕೆಜಿ ಮಾವಾ ಹಾಗೂ ಮಾವಾ ತಯಾರಿಸಲು ಬಳಸುವ ಕಚ್ಚಾ ವಸ್ತುಗಳು ಸೇರಿ ಒಟ್ಟು 79,468/- ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಉತ್ತಮ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಎಸ್ಪಿ ನಿಂಬರಗಿ ಶ್ಲಾಘಿಸಿದ್ದಾರೆ.




