ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಚಿನ್ನದ ಅಂಗಡಿ ಮಾಲೀಕನಿಗೆ ಕಂಟ್ರಿ ಪಿಸ್ತುಲ್ ತೋರಿಸಿ ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ದರೋಡೆಕೋರರಿಂದ ಚಿನ್ನದ ಅಂಗಡಿ ದರೋಡೆ ಮಾಡಿರುವ ಘಟನೆ ನಡೆದಿದೆ. ಮಹಾರುದ್ರ ಖಂಚಗಾರ ಎಂಬುವವರ ಚಿನ್ನದಂಗಡಿಯನ್ನ ದರೋಡೆಕೋರರು ಲೂಟಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಚಿನ್ನದಂಗಡಿಗೆ ಬಂದಿದ್ದ ವೃದ್ದೆಯನ್ನು ಹೆದರಿಸಿ ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿದ್ರು. ಈ ವೇಳೆ ಆತ್ಮಲಿಂಗ ಹೂಗಾರ ಎಂಬುವವರ ಕಾಲಿಗೆ ಗುಂಡು ತಾಗಿದೆ.ಸದ್ಯ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನೂ ಈ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ASP ರಾಮನಗೌಡ ಹಟ್ಟಿ, DYSP ಕಟ್ಟಿಮನಿ, ಇನ್ಸ್ಪೆಕ್ಟರ್ ಪರಶುರಾಮ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.



