ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶುಕ್ರವಾರ, ಸಂಗಮ ಬಾರ್ ಬಳಿ ಪತಿಯೊಬ್ಬನು ತನ್ನ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ರಸ್ತೆಯಲ್ಲಿ ಪತ್ನಿಯನ್ನು ಓಡಾಡಿಸಿ ಮಚ್ಚಿನಿಂದ ಹೊಡೆದಿದ್ದಾನೆ. ನಂತರ ಬಿಡಿಸಲು ಬಂದ ಜನರನ್ನು ಹೆದರಿಸಿದ್ದಾನೆ. ಇನ್ನು ಈ ಬರ್ಬರ ಹಲ್ಲೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಮಹಿಳೆ ಈ ಹಿಂದೆ ಗಂಡನಿಗೆ ವಿಷ ಹಾಕಿದ ಆರೋಪದ ಮೇಲೆ ಜಾಮೀನಿನ ಮೇಲೆ ಹೊರಬಂದಿದ್ದರು ಎಂದು ಹೇಳಲಾಗಿದೆ.




