ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗ್ರಹ ಇಲಾಖೆಯ ಸಹಯೋಗದೊಂದಿಗೆ “ಅಕ್ಕ ಪಡೆ” ಎಂಬ ಒಂದು ನೂತನ ಯೋಜನೆಯನ್ನು ಜಾರಿಗೆ ಗೊಳಿಸಿದ್ದು. ಪ್ರಸ್ತುತ ಆಧುನಿಕ ಮತ್ತು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ,ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನವ ಕಳ್ಳ ಸಾಗಣೆ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ ಅಂತಹ ಪ್ರಕರಣಗಳಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ಮಾನಸಿಕ, ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಹಿಂಸೆಗೊಳಪಟ್ಟಿರುತ್ತಾರೆ. ಆದುದರಿಂದ ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧಗಳ ಬಗ್ಗೆ ಕಾನೂನು ಅರಿವು 4 ಜಾಗೃತಿ ಮೂಡಿಸಲು ಶಿಕ್ಷಣ ನೀಡುವುದು, ಜೊತೆಗೆ ಸಂಕಷ್ಟದಲ್ಲಿ ಇರುವ ಮಹಿಳಾ ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ/ ನೆರವು ನೀಡುವ ಉದ್ದೇಶದಿಂದ “ಅಕ್ಕ ಪಡೆ” ಎಂಬ ತಂಡವನ್ನು ದಿನಾಂಕ : 28/11/2025 ರಿಂದ ರಾಜ್ಯದ 31 ಜಿಲ್ಲೆ & 5 ಪೊಲೀಸ್ ಕಮೀಷನರೇಟ್ಗಳಲ್ಲಿ ಜಾರಿಗೆ ತರಲಾಗಿದೆ. ಇಂದು ವಿಜಯಪುರದಲ್ಲಿ ಅಕ್ಕ ಪಡೆಯ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಚಾಲನೆ ನೀಡಿದರು.




