ವಿಜಯಪುರ ನಗರದ ಖಾಸಗಿ ಹೋಟೆಲ್ ವೊಂದರಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅಡ್ವೋಕೇಟ್ ಎಲ್ ಎಲ್ ಉತ್ಸಾದ್ ಮಾತನಾಡಿ ,ಮುಂದಿನ ತಿಂಗಳು ೪ನೇ ತಾರೀಕಿಗೆ ಸಾಯಂಕಾಲ 4ಗಂಟೆಗೆ ಮೆರವಣಿಗೆ ಮೂಲಕ ಜಾಮಿದಿ ಮಸೀದಿ ಬಡಿಕಮಾನ ಅತಾವುಲ್ಲಾ ಚೌಕ್, ಬಸ್ಸ್ಟ್ಯಾಂಡ್ ಟಿಪ್ಪುಸುಲ್ತಾನ ಚೌಕ್ ಬಸವೇಶ್ವರ ಚೌಕ್ ನಿಂದ ಅಂಜುಮನಿಂದ ಎಲ್ಲರ ಜೊತೆಗೆ ಕೂಡಿಕೊಂಡು ಮತ್ತೆ ಮರಳಿ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಆಸಾರಗೆ ತಲುಪುವುದು . ಈ ದೆಸೆಯಲ್ಲಿ ನಾನು ವಿಶೇಷವಾಗಿ ವಿಜಯಪುರ ಶಹರದವರಿಗೆ ಕೇವಲ ಮುಸ್ಲಿಮರಿಗಷ್ಟೇ ಅಲ್ಲ, ಎಲ್ಲ ಧರ್ಮ ಬಾಂಧವರಿಗೆ , ಹಿಂದೂ ಸಮಾಜದವರಿಗೆ ನಾವೆಲ್ಲರೂ ಕೂಡಿಕೊಂಡು ಈ ಹಜರತ್ ಮೊಹಮ್ಮದ್ ಪೈಗಂಬರ್ ರವರ 1500ನೇ ಜಯಂತ್ಯೋತ್ಸವ ಆಚರಣೆ ಮಾಡಲಿಕ್ಕೆ ಹೊರಟ್ಟಿದ್ದೇವೆ. ಸುಮಾರು ವರ್ಷಗಳಿಂದ ಈ ಆಚರಣೆ ಮಾಡುತ್ತಿದ್ದೆ ಆದರೆ ಈ ಬಾರಿ ವಿಶೇಷವಾಗಿ ಆಚರಿಸುತ್ತಿರುವುದಾಗಿ ತಿಳಿಸಿದರು.



