ಬಸವ ಸಂಸ್ಕೃತಿ ಅಭಿಯಾನಕ್ಕೆ ಸಚಿವ ಎಂ ಬಿ ಪಾಟೀಲ್ ರವರು ಚಾಲನೆ ನೀಡಿದ ಶುಭಸಂದರ್ಭದಲ್ಲಿ, ವಿವಿಧ ಮಠಗಳ ಪರಮಪೂಜ್ಯ ಗುರುಗಳ ಆಶೀರ್ವಾದ ಪಡೆದರು.ನಂತರ ಮಾತನಾಡಿದ ಸಚಿವ ಎಂ ಬಿ ಪಾಟೀಲರು ಪರಮಪೂಜ್ಯ ಗುರುಗಳ ಪಾವನ ಸಾನ್ನಿಧ್ಯ ನಮ್ಮ ಕಾರ್ಯಕ್ಕೆ ಶಕ್ತಿ ಹಾಗೂ ಪ್ರೇರಣೆ ನೀಡಿದೆ. ಎಲ್ಲರಿಗೂ ಹೃತ್ಪೂರ್ವಕ ಗುರುವಂದನೆ ಸಲ್ಲಿಸಿದರು.ಪೂಜ್ಯರ ಮಾರ್ಗದರ್ಶನ ನಾಡಿಗೆ ಸದಾಕಾಲ ಲಭಿಸಲಿ ಎಂದರು.

ಇದೇ ಸಂದರ್ಭದಲ್ಲಿ ಸಹಸ್ರಾರು ಬಸವಭಕ್ತರು,ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಕನ್ನಡಪರ ಸಂಘಟನೆಗಳು,ಕಾರ್ಯಕರ್ತರು,ಯುವಕ ಮಿತ್ರರು,ಸಮಾಜದ ಹಿರಿಯರು, ಪಾಲ್ಗೊಂಡು ಉದ್ಘಾಟನಾ ಸಮಾರಂಭವನ್ನು ಯಶಸ್ವಿಗೊಳಿಸಿದರು.




