ಪ್ರೀತಿ ಮಾಯಾಬಜಾರು ಪ್ರೀತಿ ಕುರುಡ ಎಂದೆಲ್ಲ ಗಾದೆ ಮಾತಿಗೆ ಬೆಲೆ ಕೊಡದೆ ಇಲ್ಲೊಬ್ಬಳು ತನ್ನ ಮೂರು ಮಕ್ಕಳನ್ನ ಮರೆತು , ಒಬ್ಬ ಯುವಕನ ಪ್ರೇಮದ ಬಲೆಗೆ ಬಿದ್ದು ಕೊನೆಗೆ ಪ್ರಿಯಕರನು ಸಿಗದೆ ಇತ್ತ ಮಕ್ಕಳು ಸಿಗದೆ ಇಂದು ಹೆಣವಾಗಿ ಹೋಗಿದ್ದಾಳೆ
ಹೌದು ಪ್ರತಿ ಪ್ರೇಮ ಕಹಾನಿಗೆ ಒಂದು ಅಂತ್ಯ ಇದೆ ಅದು ಇಬ್ಬರು ಸೇರುವರು, ಇಲ್ಲ ಇಬ್ಬರು ದೊರವಾಗುವರು ಆದ್ರೆ ಈ ಪ್ರೇಮ ಕಹಾನಿ ಯೇ ಡಿಫ್ರೆಂಟ್
ಗದಗ ಜಿಲ್ಲೆ ಲಕ್ಷ್ಮೀಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಳಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಏಪ್ರಿಲ್ 23ರಂದು ಲಕ್ಷ್ಮೀ ಇಂಗಳಗಿ ಮಹಿಳೆ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು, ಮೊಬೈಲ್ ಕರೆಗಳ ಹಿಸ್ಟರಿ ಜಾಲಾಡಿದಾಗ ಸತ್ಯ ಬೆಳಕಿಗೆ ಬಂದಿದೆ. ಕೊಲೆಯಾದ ಲಕ್ಷ್ಮೀಗೆ ಮೂವರು ಮಕ್ಕಳಿದ್ದರು. ಆದರೆ ಗಂಡನಿಂದ ಲಕ್ಷ್ಮೀ ದೂರವಾಗಿದ್ದಳು, ಆ ವೇಳೆಯಲ್ಲಿ ಸುನಿಲ್ ಎನ್ನುವ ಯುವಕ ಪರಿಚಯವಾಗಿದ್ದು, ಇಬ್ಬರು ನಡುವೆ ಲವ್ ಆಗಿದೆ. ಆದರೆ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಜಗಳ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.

