ವಿಜಯಪುರ ನಗರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಗೋಷ್ಠಿಯಲ್ಲಿ ಹೇಳಿಕೆ. ವಿಜಯಪುರ ನಗರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಕೆಲಸ ಮಾಡಿದ ಒಂದೆ ವರ್ಷದಲ್ಲಿ ಹಾಳಾಗಿ ಹೋಗಿವೆ. ಇಲ್ಲಿ ಬ್ರಷ್ಟಾಚಾರ ನಡೆಯುವಂತದ್ದು ಕಂಡು ಬಂದಿದೆ. ಇಲ್ಲಿ ಅಧಿಕಾರಿಗಳಿಂದ ಭ್ರಷ್ಟಾಚಾರ ಆಗುತ್ತಿದೆಯೋ ಅಥವಾ ಜನ ಪ್ರತಿನಿಧಿಗಳಿಂದ ಆಗಿದೆ ಗೊತ್ತಿಲ್ಲ ಒಟ್ಟಾರೆ ಭ್ರಷ್ಟಾಚಾರ ಆಗಿದೆ. ಇನ್ನೂ ಕಾಂಟ್ರ್ಯಾಕ್ಟರ್ ಗಳು ಸಹಿತ ಈಗ ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರದ ಬಳಿ ಹಣವೇ ಇಲ್ಲದಂತಾಗಿದೆ. ಗುತ್ತಿಗೆದಾರರ ಬಿಲ್ ರಿಲೀಸ್ ಮಾಡಿಲ್ಲ, ಸಾಕಷ್ಟು ಬಿಲ್ ಪೆಂಡಿಂಗ್ ಇದೆ. ನಾಗಠಾಣ ಹಾಗೂ ವಿಜಯಪುರ ನಗರ ಮತಕ್ಷೇತ್ರದಲ್ಲಿ ಸಾಕಷ್ಟು ಕಳಪೆ ಕಾಮಗಾರಿಯಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ವೈಫಲ್ಯ ಆಗಿದೆ.
ವಿಜಯಪುರ ನಗರವನ್ನು ಇಬ್ಬರು ಕಂಟ್ರೋಲ್ ಮಾಡುತ್ತಿದ್ದಾರೆ. ಸರ್ಕಾರದ ಎಲ್ಲ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಮಹಾನಗರ ಪಾಲಿಕೆ, ಬಿಡಿಎ ಸೇರಿದಂತೆ ಎಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗಿದೆ. ನಗರ ಶಾಸಕರು ದಿನಕ್ಕೊಂದು ಹೇಳಿಕೆ ಕೊಡುತ್ತಲೇ ಇರುತ್ತಾರೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆರೋಪಿಸಿದರು.
ಇನ್ನೂ ನ್ಯಾಯವಾದಿ ಖಾದ್ರೀ ಹಾಗೂ ಯತ್ನಾಳ ವಾಕ್ ಸಮರ ವಿಚಾರ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಪ್ರತಿಕ್ರಿಯಿಸಿ. ಇಬ್ಬರು ಸಹಿತ ಹೆಣ್ಣು ಮಕ್ಕಳ ವಿಚಾರವಾಗಿ ಮಾತನಾಡಬಾರದಿತ್ತು. ಎಲ್ಲರಿಗೂ ಅವರವರ ಧರ್ಮ ಮುಖ್ಯವಾಗುತ್ತೆ. ಆದರೆ ಇವರು ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಬಾರದು. ಬಸನಗೌಡ ಪಾಟೀಲ ಯತ್ನಾಳ ಅವರು ಅಂದು ಅನ್ನಿಸಿಕೊಳ್ಳಬಾರದು ಅದು ನಿಜಕ್ಕೂ ಶೋಚನೀಯ. ಅವರ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ನ್ಯಾಯವಾದಿ ಮಾತನಾಡಿದಕ್ಕೆ ನಾನು ಖಂಡಿಸುತ್ತೆನೆ ಎಂದರು.



