ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಭೇಟಿ ನೀಡಿ ಸಂತ್ರಸ್ಥರ ಅಳಲನ್ನು ಆಲಿಸಿ ಶಾಶ್ವತ ಪರಿಹಾರವಾಗಿ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಮಾಡುವುದಾಗಿ ಮತ್ತು ರೈತರ ಬೆಳೆ ಹಾನಿ ತೊಗರಿ, ಹತ್ತಿ, ಉಳಿಗಡ್ಡಿ100% ಹಾನಿಯಾಗಿದ್ದು ಕಬ್ಬು 50% ಹಾನಿಯಾಗಿದ್ದು ಇವುಗಳಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ತಿಳಿಸಿದರು.

ನಂತರ ಸಿಂದಗಿ ಶಾಸಕ ಅಶೋಕ್ ಮನಗೂಳಿ ಮಾತನಾಡಿ. ಕುಮಸಿಗಿ ಗ್ರಾಮದಲ್ಲಿ ವಿಶೇಷವಾಗಿ ಸಂತ್ರಸ್ತರ ಬೇಡಿಕೆ 100 ರಿಂದ 150 ಕುಟುಂಬಗಳು ನಾವು ಸ್ಥಳಾಂತರ ಗೊಳ್ಳುತ್ತೇವೆ ನಮಗೆ 5 ಎಕರೆ ಜಮೀನು ಕೊಡಿಸಿ ಶಾಶ್ವತ ಪರಿಹಾರ ಮುಂದಿನ ದಿನಮಾನಗಳಲ್ಲಿ ಒದಿಗಿಸಬೇಕೆಂದು ಊರಿನ ಜನತೆಯ ಬೇಡಿಕೆಯಾಗಿದೆ. ಆದ್ದರಿಂದ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ಮಾಡಿರುವದಾಗಿ ಮುಂದಿನ ದಿನಮಾನಗಳಲ್ಲಿ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಎರಡನೆಯದಾಗಿ ದೇವಣಗಾಂವ ಗ್ರಾಮದ ಬ್ರಿಡ್ಜ್ 1972ರಲ್ಲಿ ನಿರ್ಮಾಣಗೊಂಡಿದ್ದು ಅದು ರಿಪೇರಿ ಸ್ಥಿತಿಯಲ್ಲಿದ್ದು, ರಿಪೇರಿಗಾಗಿ ಮೂರು ಕೋಟಿ ರೂಪಾಯಿ ಸರ್ಕಾರದಲಿದ್ದು ಅದನ್ನು ಒಂದು ತಿಂಗಳ ಒಳಗಾಗಿ ರಿಪೇರಿ ಮಾಡುತ್ತೇನೆ. ದೇವಣಗಾಂವ ನಿಂದ ಆಲಮೇಲ 16 ಕಿಲೋಮಿಟರ್ ರಸ್ತೆಯು ರಿಪೇರಿ ಹಂತದಲ್ಲಿದ್ದು ಮುಂದಿನ ದಿನಮಾನಗಳಲ್ಲಿ ರಸ್ತೆ ಕೆಲಸ ಮಾಡುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ ಆನಂದ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಸಿಂದಗಿ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ, ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ, ಸಿಂದಗಿ ಸಿಪಿಐ ನಾನಾಗೌಡ್ ಪೊಲೀಸ್ ಪಾಟೀಲ್ ಹಾಗೂ ಸಿಬ್ಬಂದಿ ವರ್ಗ, ಆಲಮೇಲ ಪೊಲೀಸ್ ಠಾಣೆಯ ಪಿಎಸ್ಐ ಅರವಿಂದ್ ಅಂಗಡಿ ಮತ್ತು ಸಿಬ್ಬಂದಿ ವರ್ಗ, ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಭೀಮಾನದಿ ತೀರದ ಗ್ರಾಮಗಳ ಯುವಕರು ಮುಖಂಡರು ಉಪಸ್ಥಿತರಿದ್ದರು.



