ವಿಜಯಪುರ ಶಹರದಲ್ಲಿ ಇತ್ತಿಚೆಗೆ ಹಗಲು ಮನೆ ಕಳ್ಳತನ ಪ್ರಕರಣಗಳ ಪತ್ತೆ ಕುರಿತು ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಪೊಲೀಸ್ ಉಪ-ಅಧೀಕ್ಷಕ ಬಸವರಾಜ ಯಲಿಗಾರ ಮಾರ್ಗದರ್ಶನದಲ್ಲಿ ಗೋಲಗುಂಬಜ್ ಸಿಪಿಐ ಮಲ್ಲಯ್ಯ ಮಠಪತಿ ನೇತೃತ್ವದಲ್ಲಿ ಪಿಎಸ್ಐ ಮಹೇಶ ಸಂಖ, ಸಿ.ಆರ್.ಸಾಗರ, ಜಲನಗರ ಪೊಲೀಸ್ ಠಾಣೆ ಪಿಎಸ್ಐ ಡಿ.ಎಮ್.ಸಂಗಾಪೂರ ಹಾಗೂ ಜಲನಗರ ಪಿಎಸ್ ಸಿಬ್ಬಂದಿ ಸಿಎಚ್ಸಿ ಸತೀಶ ನಾಟಿಕಾರ, ಸಿಪಿಸಿ ಮಹೇಶ ಸಾಲಿಕೇರಿ, ಎನ್.ಬಿ.ಚವ್ಹಾಣ ಮತ್ತು ಶಶಿಕಾಂತ ತೋರವಿ, ಪಿಐ ಬೆರಳು ಮುದ್ರೆ ಘಟಕ ವಿಜಯಪುರ, ಆರ್.ಡಿ ಮುಲ್ಲಾ ಹಾಗೂ ತಾಂತ್ರಿಕ ಸಿಬ್ಬಂದಿಯಾದ ಗುಂಡು ಗಿರಣಿವಡ್ಡರ, ಮಹ್ಮದ ಬಾಗವಾನರನ್ನೊಳಗೊಂಡ ತನಿಖಾ ತಂಡವನ್ನು ರಚನೆ ಮಾಡಲಾಗಿ. ಸದರಿ ತಂಡವು ಪತ್ತೆ ಕುರಿತು ನೆರೆಯ ಜಿಲ್ಲೆಗಳಾದ ಬಾಗಲಕೋಟ, ಬೆಳಗಾವಿ ಕಡೆಗಳಲ್ಲಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಆರೋಪಿತರ ತಪಾಸಣೆಯಲ್ಲಿದ್ದಾಗ ದಿನಾಂಕ: 13.08.2025 ರಂದು ಇಬ್ಬರು ಆರೋಪಿತರನ್ನು ವಿಜಯಪುರ ಶಹರ ಹೌಸಿಂಗ್ ಬೋರ್ಡ ಕಡೆಗೆ ಅನುಮಾನಾಸ್ಪದವಾಗಿ ಅಟೋದಲ್ಲಿ ತಿರುಗಾಡುವಾಗ ಹಿಡಿದು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ ಒಟ್ಟು ಮೂರು ಜನರು ಸೇರಿಕೊಂಡು ಮನೆಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಇಬ್ಬರನ್ನೂ ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ನಂತರ ಸದರಿ ಪ್ರಕರಣದಲ್ಲಿನ ಮತ್ತೋಬ್ಬ ಆರೋಪಿತನನ್ನು ದಿನಾಂಕ: 21.08.2025 ರಂದು ಕನಕದಾಸ ಬಡಾವಣೆಯಲ್ಲಿ ತಿರುಗಾಡುವಾಗ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು.ಆರೋಪಿಗಳಾದ ಸಮೀರ ನಬಿಲಾಲ ಇನಾಮದಾರ, ಉದ್ಯೋಗ: ಕೂಲಿ ಕೆಲಸ, ಸಾ: ಹಳಕೇರಿ ಗಲ್ಲಿ, ಝಂಡಾ ಕಟ್ಟಾ, ಜೆ ಎಂ ರೋಡ ವಿಜಯಪುರ ಮತ್ತು ಹಸನಡೊಂಗ್ರಿ ಚಾಂದಸಾಬ ಮುಲ್ಲಾ, ಉದ್ಯೋಗ: ಅಟೋ ಚಾಲಕ, ಸಾ: ಶಾಪೇಠಿ ಅಪ್ಸರಾ ಟಾಕೀಸ್ ಹತ್ತಿರ ಹಾಲಿ ಸುಹಾಗ ಕಾಲನಿ, ವಿಜಯಪುರ ಹಾಗೂ ಶಪೀಕ್ ಅಹ್ಮದ ಮಹ್ಮದಗೌಸ ಇನಾಮದಾರ, ಉದ್ಯೋಗ: ಪಾನ್ ಶಾಫ್, ಸಾ: ನಿಸ್ಸಾರ ಮಡ್ಡಿ ವಿಜಯಪುರ. ಈ ಆರೋಪಿತರ ಕಡೆಯಿಂದ ಜಲನಗರ ಪಿಎಸ್ ಗುನ್ನೆ ನಂ: 90/2025 ಕಲಂ 331(3), 305 ಬಿಎನ್ಎಸ್-2023 ನೇ ಪ್ರಕರಣಕ್ಕೆ ಸಂಬಂದಿಸಿದ ಒಟ್ಟು 65 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಬಜಾಜ ಕಂಪನಿಯ ಅಟೋ ರೀಕ್ಷಾ ಹಾಗೂ ಒಂದು ಕಬ್ಬಿಣದ ರಾಡ ಹೀಗೆ ಒಟ್ಟು 8,37,000/- ರೂ ಮೌಲ್ಯದ ವಸ್ತುಗಳನ್ನು ಆರೋಪಿತರಿಂದ ಜಪ್ತಿ ಮಾಡಲಾಗಿದೆ. ಇನ್ನೂ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.




