ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ. ಮೂರು ದಿನಗಳ ಹಿಂದೆ ಸಿಎಂ, ಡಿಸಿಎಂ ಅವರು ಆಲಮಟ್ಟಿಗೆ ಬಾಗೀನ ಅರ್ಪಣೆಗೆ ಬಂದಿದ್ದರು. ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ಕಾಂಗ್ರೆಸ್ ಬಂದು ಎರಡು ವರ್ಷಗಳಲ್ಲಿ ರೈತರಿಗೆ ತೊಂದರೆ ಕೊಟ್ಟಿದ್ದಾರೆ, ಕೃಷ್ಣಾ ಭಾಗಕ್ಕೆ ನಿರ್ಲಕ್ಷ್ಯ ಮಾಡಿದ್ದಾರೆ. ಎರಡುದಿನ ಮುಂಚಿತವಾಗಿ ಮೀಟಿಂಗ್ ಮಾಡಿ ಸುಳ್ಳು ಭರವಸೆ ಕೊಟ್ಟಿದ್ದಾರೆ. ಆಲಮಟ್ಟಿಗೆ ಬಂದಾಗ ರೈತರಿಗೆ ಭೇಟಿಯಾಗಿಲ್ಲ. ಯುಕೆಪಿ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ. ರೈತರಿಗೆ, ವಕೀಲರಿಗೆ ಅವಮಾನ ಮಾಡಿದ್ದೀರಿ. ಕನ್ಸಂಟ್ ಅವಾರ್ಡ್ ನಲ್ಲಿ ನೀವು ಕೊಟ್ಟಷ್ಟೆ ತೆಗೆದುಕೊಳ್ಳಬೇಕಾ?, ಭೂಮಿ ನಮ್ಮದು, ರೇಟು ನಮ್ಮದು. ತಾಯಿಯಂತಿರುವ ಜಮೀನು ಕೊಡುವುದು ತಾಯಿಯನ್ನೇ ಮಾರಿಕೊಂಡಂತೆ, ರೈತರಿಗೆ ಭಾವನೆಗಳು ಇರುತ್ತವೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ವಕೀಲರು ರೈತರ ದಾರಿ ತಪ್ಪಿಸುತ್ತಿದ್ದಾರೆ ಎಂದಿರಿ, ರೈತರಿಗೆ ಬುದ್ದಿ ಇದೆ. ಅವರನ್ನೇಕೆ ದಾರಿ ತಪ್ಪಿಸುತ್ತಾರೆ?. ವಕೀಲರ ಬಗ್ಗೆ ಕೇವಲವಾಗಿ ಮಾತನಾಡಿದ ನಿಮಗೆ ನ್ಯಾಯಾಂಗದ ಬಗ್ಗೆ ಗೌರವವಿಲ್ಲ. ರೈತರಿಗೆ, ವಕೀಲರಿಗೆ ಅವಮಾನ ಮಾಡಿರುವ ನೀವು ಕ್ಷಮೆ ಕೇಳಬೇಕು. ಕಾವೇರಿ 200 ಕಿಮಿ ಹರಿದಿದೆ. 687 ಕಿಮಿ ಹರಿದಿರುವ ಕೃಷ್ಣೆಯ ಬಗ್ಗೆ ಯಾಕೆ ತಾತ್ಸಾರ, ಕೆಟ್ಟ ಮನೋಭಾವನೆ ಹೊಂದಿದ್ದೀರಿ. ಒಂದು ಮತ್ತು ಎರಡನೇ ಹಂತದಲ್ಲಿ ಭೂಮಿ ವಶಪಡಿಸಿಕೊಂಡಿದ್ದೀರಿ, ಸಾಕಷ್ಟು ಕಾಲುವೆ ತೋಡಿದ್ದೀರಿ. ಕಳೆದ 10 ವರ್ಷಗಳಿಂದ ಅವರಿಗೆ ಪರಿಹಾರ ಕೊಡದಿದ್ದರೆ ಅವರ ಗತಿ ಏನು?. ರೈತರಿಗೆ ಹಣ ಕೊಡುವಂತೆ ನ್ಯಾಯಾಲಯದ ಆದೇಶವಾದರೂ ಅದರ ಬಗ್ಗೆ ನೀವು ವಿಚಾರ ಮಾಡುತ್ತಿಲ್ಲ. ಗಣೇಶನ ಮೆರವಣಿಗೆಯಲ್ಲಿ ಲಾಠಿ ಚಾರ್ಜ್ ಮಾಡಿದ್ದೀರಿ. ಪಂಚಮಸಾಲಿಗರು 2ಎ ಮೀಸಲಾತಿ ಕೇಳಿದರೆ ಬೆಳಗಾವಿಯಲ್ಲಿ ಲಾಠಿ ಚಾರ್ಜ್ ಮಾಡಿದ್ದೀರಿ. ಎಲ್ಲ ರಂಗದಲ್ಲೂ ಜನರಿಗೆ ನೀವು ಹಿಂಸೆ ಮಾಡುತ್ತಿದ್ದಾರೆ. ವ್ಯಾಪಾರಸ್ಥರಿಗೆ ಜಿ ಎಸ್ ಟಿ ನೋಟಿಸ್ ಕೊಡುತ್ತಿದ್ದೀರಿ. ವ್ಯಾಪಾರಸ್ಥರಿಗೆ ಭಯ ಹುಟ್ಟಿಸುವ ಕೆಲಸಮಾಡುತ್ತಿದ್ದೀರಿ. ಜಿಪಂ, ತಾಪಂ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡುತ್ತೇವೆ ಎಂದು ಮತ್ತೆ 100 ವರ್ಷ ಹಿಂದೆ ಹೋಗುತ್ತಿದ್ದೀರಿ. ಎಸ್ಸಿ, ಎಸ್ಟಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಮೋದಿ ಅವರು ಬಡವರ, ದಿನಬಳಕೆ ವಸ್ತುಗಳ ಮೇಲೆ ಜಿ ಎಸ್ ಟಿ ಕಡಿಮೆ ಮಾಡುವ ಮೂಲಕ ಬಡವರ ಪರವಾಗಿದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ. ಮೋದಿ ಅವರು ದೀಪಾವಳಿಗೆ ಗಿಫ್ಟ್ ಕೊಡುತ್ತೇನೆ ಎಂದು ಹೇಳಿದ್ದರು, ಅದಕ್ಕೂ ಮೊದಲೇ ಜಿ ಎಸ್ ಟಿ ಕಡಿಮೆಮಾಡಿ ಗಿಫ್ಟ್ ಕೊಟ್ಟಿದ್ದಾರೆ.ಕರ್ನಾಟಕದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವಲ್ಲ, ಇದು ಕರ್ನಾಟಕದ ಕಾಂಗ್ರೆಸ್ ಕಂಪನಿಯಾಗಿದೆ.ಈಗಾಗಲೇ ಎರಡು ಖಾಸಗಿ ಕಾಲೇಜು ಇರುವುದರಿಂದ ಪಿಪಿಪಿ ಮಾಡದೆ ಸರ್ಕಾರಿ ಕಾಲೇಜು ಮಾಡಬೇಕು. ಸರ್ಕಾರಿ ಕಾಲೇಜು ಬೇಕು ಎಂದು ನಡೆಸುತ್ತಿರುವ ಹೋರಾಟ ಸಮೀತಿಗೆ ನಮ್ಮ ಬೆಂಬಲ ಇದೆ ಎಂದರು.
ಇದೆ ವೇಳೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ,ಮುಖಂಡ ವಿಜುಗೌಡ ಪಾಟೀಲ್,ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ,ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ಕಾಸುಗೌಡ ಬಿರಾದಾರ, ಈರಣ್ಣ ರಾವೂರ, ಸಂಜೀವ ಐಹೊಳ್ಳಿ, ವಿಜಯ ಜೋಶಿ ಉಪಸ್ಥಿತರಿದ್ದರು.



