ಶಾಲಾ ಅವಧಿಯಲ್ಲಿ ಶಿಕ್ಷಣ ಸಾಲದು ಎಂದು ಪೋಷಕರು ತಮ್ಮ ಮಕ್ಕಳಿಗೆ ಮತ್ತೆ ಹೆಚ್ಚು ದುಡ್ಡು ಕೊಟ್ಟು ಟ್ಯೂಷನ್ಗೆ ಎಂದು ಕಲಿಸುತ್ತಾರೆ. ಈ ಒತ್ತಡದ ಜೀವನದಲ್ಲಿ ತಮ್ಮ ಮಕ್ಕಳಿಗೆ ಮನೆಯಲ್ಲೇ ವಿದ್ಯಾಭ್ಯಾಸ ಮಾಡಿಸಲು ಸಮಯ ವಿರದಕಾರಣ ಮಕ್ಕಳಿಗೆ ಟ್ಯೂಷನ್ಗೆ ಸೇರಿಸುತ್ತಾರೆ ಆದರೆ ಇಲ್ಲೊಂದು ದುರಂತವೇ ನಡೆದು ಹೋಗಿದೆ
ತಮಿಳುನಾಡಿನಲ್ಲಿ ಖಾಸಗಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕಿಯ ಮನೆಗೆ ಟ್ಯೂಷನ್ಗೆ ಬರುತ್ತಿದ್ದಳು. ಶಿಕ್ಷಕಿ ಮನೆಯಲ್ಲಿಲ್ಲದ ಸಮಯದಲ್ಲಿ ಆಕೆಯ ಪತಿ ಆರೋಗ್ಯ ದಾಸ್ (45) ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರ ಪರಿಣಾಮವಾಗಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ಈ ಸಂಬಂಧ ದೂರು ದಾಖಲಾಗಿದ್ದು, ರವಿವಾರ ಪೊಲೀಸರು ಆರೋಗ್ಯ ದಾಸ್ನನ್ನು ಪೋಕ್ಸ ಕಾಯ್ದೆಯಡಿ ಬಂಧಿಸಿದ್ದಾರೆ. ಆತನ ವಿರುದ್ಧ ತನಿಖೆ ನಡೆಯುತ್ತಿದೆ.





