ಬಬಲೇಶ್ವರ ಮತಕ್ಷೇತ್ರದಲ್ಲಿ ಇಂದು ರಾಜಕೀಯ ಚಿತ್ರಣವೇ ಬದಲಾಗಿದೆ. ‘ನುಡಿದಂತೆ ನಡೆಯುವ’ ಭಗೀರಥನ ಅಭಿವ್ರಿದ್ದಿಗೆ ಮನಸೋತು, ಬಿಜೆಪಿಯ ಪ್ರಮುಖರು, ಕಾರ್ಯಕರ್ತರು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಜೈ ಎಂದಿದ್ದಾರೆ. ಸಚಿವ ಎಂ ಬಿ ಪಾಟೀಲರ ಅಭಿವೃದ್ಧಿಯ ಹಾದಿ ಮತ್ತು ಗಟ್ಟಿಯಾದ ಸಿದ್ಧಾಂತವನ್ನು ನಂಬಿ ಬಂದ ಈ ಎಲ್ಲಾ ಕಾರ್ಯಕರ್ತರಿಗೆ ಸಚಿವ ಎಂ ಬಿ ಪಾರ್ಟಿಲರು ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು.ಬಳಿಕ ಮಾತನಾಡಿದ ಅವರು ಇವರ ಆಗಮನದಿಂದ ಬಬಲೇಶ್ವರದಲ್ಲಿ ಕಾಂಗ್ರೆಸ್ ಕೋಟೆ ಮತ್ತಷ್ಟು ಭದ್ರವಾಗಿದೆ ಎಂದರು.
ಇದೆ ವೇಳೆ ಮುಖಂಡರಾದ ಸುರೇಶ್ ತೊರವಿ, ಎಚ್ ಎಲ್ ತಳವಾರ್, ಪರಸು ಕೋಳಿ ಗಣಪತಿ ತೊರವಿ, ಅಪ್ಪಸಾಹೇಬ್ ಡ್ಯಾಬೇರಿ, ದಯಾನಂದ ಶಿರಹಟ್ಟಿ, ಪ್ರಕಾಶ್ ಹಾಲಳ್ಳಿ, ಭೀಮು ಹಾಲಳ್ಳಿ, ರಮೇಶ್ ಗುಡದಿನ್ನಿ, ವಿಲಾಸ ಮಾಳಿ. ನಾಗಪ್ಪ ಮಾಳಿ, ಶ್ರೀಮತಿ ಶಾಂತಾಭಾಯಿ ತಳವಾರ, ಗೀತಾ ತೋರವಿ, ಪುಷ್ಪಾ ತೊರವಿ, ಮಂಗಲಾ ತಳವಾರ, ಮನಿಷಾ ತಳವಾರ. ಕವಿತಾ ಹಾಲಳ್ಳಿ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.




