ರಾಷ್ಟ್ರೀಯ ಅಧ್ಯಕ್ಷರಾದ ಸುಲೇಮಾನ್ ಎಂ ಜಮಾದಾರ್ ಅವರ ನೇತೃತ್ವದಲ್ಲಿ ಬೆಳಗಾವಿಯ ಕೇಂದ್ರ ಕಚೇರಿಯಲ್ಲಿ ಎಸ್ ಎಂ ಜೆ ಮಾನವ ಹಕ್ಕುಗಳ ಕಾರ್ಯಕ್ರಮವನ್ನು ಮಾಡಲಾಯಿತು. ಜನರಲ್ಲಿ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡದೆ ಮಾನವ ಹಕ್ಕುಗಳನ್ನು ಮಾಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಇದೇ ವೇಳೆ ಬೆಳಗಾವಿ ಜಿಲ್ಲೆಯ ಆರು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನಜೀರ್ ಮಕಂದಾರ್, ಬೆಳಗಾವಿ ಜಿಲ್ಲೆಯ ಉಸ್ತುವಾರಿ ಅನ್ವರ್ ಪಠಾಣ್, ಬೆಳಗಾವಿ ನಗರ ಕಾರ್ಯದರ್ಶಿ ರಜತ್ ಹಟ್ಟಿವಳಿ, ಬೆಳಗಾವಿ ನಗರ ಉಸ್ತುವಾರಿ ಮಲಿಕ್ ಜಾನ್ ನಾಯಕ್, ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಲಿದ್ ಮನಿಯರ್ ಅಸಲಮ ಈ ಕಾರ್ಯಕ್ರಮದಲ್ಲಿ ಸುಲೇಮಾನ್ ಎಂ ಜಮಾದಾರ್ ಅವರು ಮಾನವ ಹಕ್ಕುಗಳಾದ ಸಮಾನತೆ ಹಕ್ಕು ಶಿಕ್ಷಣಿಕ ಹಕ್ಕು ಜೀವಿಸುವ ಹಕ್ಕು ಸ್ವತಂತ್ರದ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಇನ್ನೂ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮತ್ತು ನ್ಯಾಯವಾದಿಗಳು ಕಾನೂನು ಸಲಹೆಗಾರರು ಶ್ರಾವಣ್ ಮಾರುತಿ ಕಾಂಬಳೆ, ರಾಷ್ಟ್ರ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಎನ್ ಅರಳಿಕಟ್ಟಿ, ಮಹಿಳಾ ರಾಷ್ಟ್ರೀಯ ಅಧ್ಯಕ್ಷರು ನ್ಯಾಯವಾದಿಗಳು ಹಾಗೂ ಕಾನೂನು ಸಲಹೆಗಾರರು ಸಂತೋಷ್ ಐಹೊಳೆ, ಆಸಿಫ್ ಜತ್ತಿ ಸಂಘದ ಸಲಹೆಗಾರರು ಜಾವಿದ್ ಮುಗಲ್ ಮುಕ್ತಿಯರ್, ತಹಸಿಲ್ದಾರ್ ಆಸ್ಮಾ ಅಂಡ್ಗಿ ಉಪಸ್ಥಿತರಿದ್ದರು .



