ಮನಗೂಳಿ ಕೆನರಾ ಬ್ಯಾಂಕ್ ಪ್ರಕರಣದಲ್ಲಿ 15 ಜನ ಆರೋಪಿತರನ್ನು ಹೆಡೆಮುರಿ ಕಟ್ಟಿದ ವಿಜಯಪುರ ಪೊಲೀಸ್ ದಸ್ತಗೀರ್ ಮಾಡಿ ಆರೋಪಿತರಿಂದ್ 39 ಕೆಜಿ ಬಂಗಾರದ ಗಟ್ಟಿ ಹಾಗೂ ಆಭರಣ ಮತ್ತು 1.16 ಕೋಟಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ ಒಟ್ಟು 39.26 ಕೋಟಿಗಿಂತ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಸದರಿ ಪ್ರಕರಣದಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಐಜಿಪಿ ಸಾಹೇಬರು ಉತ್ತರ ವಲಯ ಬೆಳಗಾವಿ ರವರು ಶ್ಲಾಘಿಸಿ ಪ್ರಶಂಸ ಪತ್ರ ನೀಡಿ ಸೂಕ್ತ ಬಹುಮಾನ ಘೋಷಿಸಲಾಯಿತು.




