ರಾಜ್ಯದ ಮೂರನೇ ಅತಿ ದೊಡ್ಡ ‘ಮಮದಾಪುರ ಕೆರೆಗೆ ಮತ್ತೆ ಜೀವಕಳೆ!
ವಿಜಯಪುರದ ಆದಿಲ್ ಶಾಹಿ ಕಾಲದ ಐತಿಹಾಸಿಕ ಮಮದಾಪುರ ಕೆರೆ ಕರ್ನಾಟಕ ರಾಜ್ಯದಲ್ಲಿರುವ ಮೂರನೆಯ ಅತೀ ದೊಡ್ಡ ಕೆರೆಯಾಗಿದೆ. ಈ ಕೆರೆಗೆ ನೀರು ಹಾಯಿಸುವಂತೆ ಸೂಚಿಸಿದ್ದು, ಅದರಂತೆ ಅಧಿಕಾರಿಗಳು ನೀರು ಹರಿಸಿ, ಮತ್ತೆ ಜೀವ ಕಳೆ ಸೃಷ್ಟಿಸಿದ್ದಾರೆ.

ಈ ಕೆರೆ ಸುತ್ತಮುತ್ತಲಿನ 32 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವುದರ ಜೊತೆಗೆ, ವಿಜಯಪುರ ಜಿಲ್ಲೆಯ ಬಹುಪಾಲು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಸುಧಾರಣೆಗೂ ಕಾರಣವಾಗಿದೆ.
ಜೀವಕಳೆ ತುಂಬಿರುವ ಈ ಕೆರೆ ವಿಜಯಪುರದ ಜನತೆಗೆ ಜೀವನದಿಯಂತಾಗಿದೆ



