ದಿನಾಂಕ 03/09/2025 ರಂದು ವಿಜಯಪುರ ನಗರದಲ್ಲಿಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಹೆಸ್ಕಾಂನವರ ನಿರ್ಲಕ್ಷದಿಂದ ಗಣೇಶನ ಯುವ ಭಕ್ತ ಶುಭಂ ಸಂಕಪಾಳ ಸಾವಿಗಿಡಾಗಿದ್ದು,ಇವರು ಅತಿ ಕಡು ಬಡವರಾಗಿದ್ದು ಮನೆ ನಿರ್ವಹಣೆ ಮಾಡುವ ಕಷ್ಟವಿರುವ ಸಮಯದಲ್ಲಿ ಬೆಳೆದು ನಿಂತಂತಹ ಹದಿಹರೆಯದ ಮಗ ಸಾವಿಗಿಡಾಗಿ ಇಡೀ ಕುಟುಂಬ ದುಖಃದಲ್ಲಿ ಮುಳಗಿದೆ. ಕಿತ್ತು ತಿನ್ನುವ ಬಡತನ ತಂದೆ ತಾಯಿ ಕುಲಿಕೆಲಸ ಮಾಡುತ್ತಿದ್ದು ತಂಗಿಯ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಂತ ಸಹೋದರ ಸಾವಿಗಿಡಾಗಿದ್ದು ಇಡೀ ಕುಟುಂಬಕ್ಕೆ ಬರಸಿಡಿಲು ಬಡದಂತಾಗಿದೆ.ನಿರ್ಲಕ್ಷ ವಹಿಸಿದ ಹೆಸ್ಕಾಂ ಸಂಸ್ಥೆಯಲ್ಲಿ ಸಾವಿಗೀಡಾದ ಶುಭಂ ಸಂಕಪಾಳ ಸಹೋದರಿಗೆ ನೌಕರಿ ನೀಡುವಂತೆ ಹಾಗೂ ನಿರ್ಲಕ್ಷ್ಯ ವಹಿಸಿದ ಸಂಬಂಧಿಸಿದ ಎಲ್ಲ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಾಗೃತ ಹಿಂದೂ ಮಂಚ್ ವತಿಯಿಂದ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.




